ರೈತ ಪ್ರತಿಭಟನೆ ಬೆಂಬಲಿಸಿ ಕಾಂಗ್ರೆಸ್ ನಿಂದ ಪೋಸ್ಟ್ ಕಾರ್ಡ್ ಚಳವಳಿ | 8,80,000 ರೈತರಿಂದ ಸಹಿ

Prasthutha|

ಬೆಂಗಳೂರು : ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ, ಕರ್ನಾಟಕ ಕಾಂಗ್ರೆಸ್ ಕಾರ್ಡ್ ಚಳವಳಿ ನಡೆಸಿದ್ದು, ಈ ಅಭಿಯಾನದಲ್ಲಿ 8,80,000ಕ್ಕೂ ಅಧಿಕ ರೈತರು ಪೋಸ್ಟ್ ಕಾರ್ಡ್ ಗಳಿಗೆ ಸಹಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಪೋಸ್ಟರ್ ಒಂದರಲ್ಲಿ ಈ ಮಾಹಿತಿ ಲಭ್ಯವಾಗಿದೆ.

- Advertisement -

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ಬೃಹತ್ ಪೋಸ್ಟ್ ಕಾರ್ಡ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

8,8000ಕ್ಕೂ ಅಧಿಕ ರೈತರು ಈ ಪೋಸ್ಟ್ ಕಾರ್ಡ್ ಗಳಿಗೆ ಸಹಿ ಮಾಡಿ ಅದನ್ನು ನಮ್ಮ ಕಾರ್ಯಕರ್ತರಿಗೆ ನೀಡಿದ್ದಾರೆ ಎಂದು ಪೋಸ್ಟರ್ ನಲ್ಲಿ ತಿಳಿಸಲಾಗಿದೆ.

- Advertisement -

ಮೋದಿ ನೇತೃತ್ವದ ಬಿಜೆಪಿ ಸರಕಾರವು ದೇಶದ ರೈತರನ್ನು ಗುಲಾಮರನ್ನಾಗಿಸಲು ಕೃಷಿ ಮಸೂದೆಗಳಿಗೆ ತಿದ್ದುಪಡಿ ತಂದಿದ್ದು, ಈ ಕುಟಿಲ ಕಾನೂನುಗಳನ್ನು ರದ್ದುಪಡಿಸಿ ರೈತರ ಹಿತ ಕಾಯಬೇಕೆಂದು ದೆಹಲಿಯಲ್ಲಿ ರಾಷ್ಟ್ರಪತಿಗಳಿಗೆ ಒತ್ತಾಯಿಸಿ ಈ ಪೋಸ್ಟ್ ಕಾರ್ಡ್ ಹಸ್ತಾಂತಿಸಲಿದ್ದೇವೆ ಎಂದು ಪೋಸ್ಟರ್ ನಲ್ಲಿ ತಿಳಿಸಲಾಗಿದೆ.



Join Whatsapp