ಬ್ರಿಟನ್ ರಾಜಕೀಯ ಬಿಕ್ಕಟ್ಟು: ರಿಷಿ ಸುನಕ್ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬೋರಿಸ್ ಜಾನ್ಸನ್ ಆಗ್ರಹ

Prasthutha|

ಇಂಗ್ಲೆಂಡ್: ರಿಷಿ ಸುನಕ್ ಅವರು ಮುಂದಿನ ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್’ನಲ್ಲಿ ಮುಂಚೂಣಿಯಲ್ಲಿದ್ದು, ಕನ್ಸರ್ವೇಟಿವ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ರಿಷಿ ಸುನಕ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅಗ್ರಹಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ ಅವರನ್ನು ಸೋಲಿಸಿ ಲಿಝ್ ಟ್ರಸ್ ಅವರು ಆರು ವಾರಗಳ ಹಿಂದೆ ಪ್ರಧಾನಿ ಹುದ್ದೆಗೇರಿದ್ದರು. ಮಾಜಿ ಹಣಕಾಸು ಸಚಿವರಾದ ಸುನಕ್ ಅವರು ಬ್ರಿಟನ್’ನ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿವೆ.

ಡಿಸೆಂಬರ್ 2024ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷವು ಸೋಲಿಸುವ ಸಾಧ್ಯತೆಯಿರುವುದರಿಂದ ತನ್ನನ್ನು ಪ್ರಧಾನಿಯನ್ನಾಗಿಸುವಂತೆ ಪಕ್ಷದ ನಾಯಕರಿಗೆ ಮನವರಿಕೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಸಂಸತ್ತಿನಲ್ಲಿ ಬಹುಮತವನ್ನು ಹೊಂದಿರುವ ಆಡಳಿತ ಪಕ್ಷದ ಜನಪ್ರಿಯತೆಯನ್ನು ಕುಗ್ಗಿಸಲು ವಿರೋಧ ಪಕ್ಷಗಳು ಶೀಘ್ರ ಚುನಾವಣೆಗೆ ಒತ್ತಾಯಿಸುತ್ತಿವೆ. ಪ್ರಧಾನಿ ಹುದ್ದೆಯ ಚುನಾವಣೆಯು ಮುಂದಿನ ವಾರ ನಡೆಯಲಿದ್ದು, ಶುಕ್ರವಾರದೊಳಗೆ ಆಯ್ಕೆ ಹೊರಬೀಳುವ ಸಾಧ್ಯತೆಯಿದೆ.



Join Whatsapp