ಅತಿ ಕಡಿಮೆ ಜಿಎಸ್ ಡಿಪಿ ದಾಖಲಿಸಿದ ಗುಜರಾತ್

Prasthutha|

ನವದೆಹಲಿ: ಭಾರತದ ಎರಡನೆಯ ಅತಿ ದೊಡ್ಡ ಆರ್ಥಿಕತೆ ಎನ್ನಲಾದ ಗುಜರಾತ್ 2020-21ರ ಜಿಎಸ್ ಡಿಪಿ- ರಾಜ್ಯದ ಒಟ್ಟು ಉತ್ಪಾದನೆಯಲ್ಲಿ ಐದು ವರ್ಷಗಳಲ್ಲೇ ಅತಿ ಕಡಿಮೆ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಸಿಎಜಿ- ಭಾರತದ ಮಹಾ ಲೇಖಪಾಲರ ವರದಿಯಲ್ಲಿ ತಿಳಿಸಲಾಗಿದೆ.

- Advertisement -

ಸಾಂಕ್ರಾಮಿಕದ ಲಾಕ್ ಡೌನ್ ನ ಜೊತೆಗೆ ಈ ಅವಧಿಯಲ್ಲಿ ನಾನಾ ತಡೆ ಮಿತಿಗಳನ್ನು ರಾಜ್ಯ ಕಂಡಿತು ಎನ್ನಲಾಗಿದೆ.

ನಿನ್ನೆ ಬಜೆಟ್ ಅಧಿವೇಶನದ ಕೊನೆಯ ದಿನವಾದುದರಿಂದ ಗುಜರಾತ್ ವಿಧಾನ ಸಭೆಯಲ್ಲಿ ಮಾರ್ಚ್ 31, 2021ಕ್ಕೆ ಮುಗಿದ ಸಿಎಜಿ ವರದಿಯನ್ನು ಮಂಡಿಸಲಾಯಿತು.

- Advertisement -

2016- 17ರಿಂದ 2020- 21ರ ನಡುವೆ ದೇಶದ ಜಿಎಸ್ ಡಿಪಿ ಜೊತೆಗೆ ಹೋಲಿಸಿದರೆ ಗುಜರಾತ್ ಜಿಎಸ್ ಡಿಪಿ ಉತ್ತಮ ಬೆಳವಣಿಗೆ ಕಂಡಿದೆ. ಆದರೆ 2020- 21ರಲ್ಲಿ ದೇಶದಲ್ಲಿ ಜಿಎಸ್ ಡಿಪಿ ನಕಾರಾತ್ಮಕ ಬೆಳವಣಿಗೆ ಕಂಡರೆ ಗುಜರಾತಿನಲ್ಲಿ ಪಾತಾಳ ಕಂಡಿತ್ತು.

2020- 21ರಲ್ಲಿ ಹಿಂದಿನ ವರ್ಷದ ರಾಜ್ಯದ ಹಣಕಾಸು ಬೆಳವಣಿಗೆ ದರ 0.57% ಇತ್ತು. ಜಿಎಸ್ ಡಿಪಿ ದರವು 2016- 17ರಲ್ಲಿ 13.43%, 2017- 18ರಲ್ಲಿ 13.08%, 2018- 19ರಲ್ಲಿ 9.75% ಇತ್ತು. ಕಳೆದ ವರ್ಷ ನಕಾರಾತ್ಮಕ ಬೆಳವಣಿಗೆ ಕಂಡು ಜಿಎಸ್ ಡಿಪಿ ಮೈನಸ್ 2.97%ಕ್ಕೆ ಕುಸಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಂದು ರಾಜ್ಯದಲ್ಲಿ ಒಂದು ಅವಧಿಯಲ್ಲಿ ತಯಾರಾದ ವಸ್ತುಗಳು ಮತ್ತು ಆ ಸಂಬಂಧಿ ಸೇವೆಯ ಮೇಲೆ ಜಿಎಸ್ ಡಿಪಿ ಲೆಕ್ಕ ಹಾಕಲಾಗುತ್ತದೆ. ಜಿಎಸ್ ಡಿಪಿ ಬೆಳವಣಿಗೆಯು ರಾಜ್ಯದ ಆರ್ಥಿಕತೆಯಲ್ಲಿ ಅತಿ ಮುಖ್ಯ ಅಂಶವಾಗುತ್ತದೆ. ಹಣಕಾಸು ಅಭಿವೃದ್ಧಿ ಅದನ್ನು ಅವಲಂಬಿಸಿದೆ.

“ಗುಜರಾತಿನ ಪ್ರಸಕ್ತ ಜಿಎಸ್ ಡಿಪಿ ಮೌಲ್ಯವು ರೂ. 16,58,865 ಕೋಟಿ. ತಲಾವಾರು ಜಿಎಸ್ ಡಿಪಿ ರೂ. 2,35,969 ಇದ್ದು ರಾಷ್ಟ್ರೀಯ ತಲಾವಾರು ಜಿಎಸ್ ಡಿಪಿ ರೂ. 1,45,680ಕ್ಕಿಂತ ಹೆಚ್ಚು. ಗುಜರಾತ್ ದೇಶದ 9ನೇ ಅತಿ ಜನಸಂಖ್ಯೆಯ ರಾಜ್ಯವಾಗಿದೆ.

ರಾಜ್ಯದ ಜನಸಂಖ್ಯೆಯು 6.10 ಕೋಟಿಯಿಂದ 2021ರಲ್ಲಿ 7.03 ಕೋಟಿಗೆ ಏರಿದೆ. ಅಂದರೆ 15.25% ಏರಿಕೆ ಎಂದು ಸಿಎಜಿ ವರದಿ ಸ್ಪಷ್ಟಪಡಿಸಿದೆ

ಕೈಗಾರಿಕಾ ಜಿಎಸ್ ಡಿಪಿ ಪ್ರಮಾಣದಲ್ಲಿ 2015- 16ರಲ್ಲಿ 39.72%, 2019- 20ರಲ್ಲಿ 38.44% ಕಡಿಮೆಯಾಗಿದೆ. ಹಾಗೆಯೇ ಕೃಷಿ ಮತ್ತು ಸೇವಾ ವಲಯದ ಜಿಎಸ್ ಡಿಪಿ ಪ್ರಮಾಣ ಕೂಡ ತೀರಾ ಕಡಿಮೆಯಾಗಿದೆ.



Join Whatsapp