ಎರಡು ಮುಖದ ಶಶಿ ತರೂರ್: ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಿಸ್ತ್ರಿ ಕೆಂಡಾಮಂಡಲ

Prasthutha|

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಶಶಿ ತರೂರು ಪಾಳೆಯ ಮಾಡಿದ ಆರೋಪ ಗಮನ ಸೆಳೆದಿತ್ತು. ಮಲ್ಲಿಕಾರ್ಜುನ ಖರ್ಗೆ ಗೆಲ್ಲುತ್ತಿದ್ದಂತೆ ಇತ್ತ ಶಶಿ ತರೂರ್ ಬಣದವರು ಚುನಾವಣೆಯ ಪಾರದರ್ಶಕತೆ ಬಗ್ಗೆಯೇ ಪ್ರಶ್ನೆ ಮಾಡಿದ್ದರು. ಕಾಂಗ್ರೆಸ್ ಚುನಾವಣೆಯಲ್ಲಿ ಗಂಭೀರ ಸ್ವರೂಪದ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ್ ಮಿಸ್ತ್ರಿಯವರಿಗೆ ದೂರು ಕೂಡ ನೀಡಿದ್ದರು. ಬಳಿಕ ಇದನ್ನೆಲ್ಲ ಇಲ್ಲಿಗೇ ಮುಗಿಸಿ, ಮುಂದೆ ಹೆಜ್ಜೆ ಹಾಕೋಣ’ ಎಂದು ಹೇಳಿದ್ದರು.

- Advertisement -

ಆದರೆ ಶಶಿ ತರೂರ್ ತಂಡ ಮಾಡಿದ ಆರೋಪಕ್ಕೆ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ ಮಿಸ್ತ್ರಿ ಕಟು ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಪ್ರಕ್ರಿಯೆಗಳ ಬಗ್ಗೆ ನಾವು ನೀಡಿದ ಉತ್ತರದಿಂದ ತೃಪ್ತಿಯಾಗಿದೆ ಎಂದು ನನ್ನೆದುರೇ ಹೇಳಿ ಹೋದ ಶಶಿ ತರೂರ್ ಮತ್ತು ಅವರ ಟೀಮ್ ನವರು, ಮಾಧ್ಯಮಗಳ ಮುಂದೆ ಹೋಗಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರೆ. ನನ್ನೆದುರು ಒಂದು ಹೇಳುತ್ತೀರಿ, ಮಾಧ್ಯಮದ ಎದುರು ಹೋಗಿ ಮತ್ತೊಂದು ತರಹ ಮಾತನಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಶಶಿ ತರೂರ್ ಟೀಮ್ಗೆ ಪತ್ರವನ್ನೂ ಬರೆದಿದ್ದಾರೆ.



Join Whatsapp