ಜೆ.ಪಿ.ನಡ್ಡಾರ ಸಾಂಕೇತಿಕ ಸಮಾಧಿ ನಿರ್ಮಿಸಿದ ಅಪರಿಚಿತರು!

Prasthutha|

ಹೈದರಾಬಾದ್ : ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಸಾಂಕೇತಿಕ ಸಮಾಧಿ ಮಾಡಿರುವ ಘಟನೆ ತೆಲಂಗಾಣದ  ಮುನುಗೋಡಿನ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಕೆಲವು ಅಪರಿಚಿತ ವ್ಯಕ್ತಿಗಳು ಬುಧವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಭಾವಚಿತ್ರವಿರುವ ಪೋಸ್ಟರ್ ಅನ್ನು ಸಮಾಧಿಯ ಪಕ್ಕದಲ್ಲಿ ಇರಿಸಿ, ನಲ್ಗೊಂಡ ಜಿಲ್ಲೆಯ ಮುನುಗೋಡಿನ ಚೌಟುಪ್ಪಲ್ ಪ್ರದೇಶದಲ್ಲಿ ಪ್ರಾದೇಶಿಕ ಫ್ಲೋರೈಡ್ ಮಿಟಿಗೇಷನ್ ಮತ್ತು ರಿಸರ್ಚ್ ಸೆಂಟರ್ ಅನ್ನು ತಕ್ಷಣವೇ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ.

ಈ ಕ್ರಮವನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಸಮಾಧಿಯನ್ನು ಅಗೆಯುವುದು ಮತ್ತು ಜೆಪಿ ನಡ್ಡಾ ಅವರ ಚಿತ್ರವನ್ನು ಹಾಕುವುದು ಮೂರ್ಖತನ. ನಾವು ಇದನ್ನು ಖಂಡಿಸುತ್ತೇವೆ ಮತ್ತು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಬಿಜೆಪಿ ಮುಖಂಡ ಎನ್.ವಿ.ಸುಭಾಷ್ ಎಚ್ಚರಿಕೆ ನೀಡಿದ್ದಾರೆ.

- Advertisement -

ಮುನುಗೋಡಿನಲ್ಲಿ ಫ್ಲೋರೈಡ್ ಇನ್ಸ್ಟಿಟ್ಯೂಟ್ ಇರಲಿದೆ ಎಂದು ಜೆಪಿ ನಡ್ಡಾ ಘೋಷಿಸಿದ ನಂತರ ಬಿಜೆಪಿ ಕೆಸಿಆರ್ ನೇತೃತ್ವದ ಟಿಆರ್ ಎಸ್ ಸರ್ಕಾರಕ್ಕೆ ಮನವಿ ಮಾಡಿತ್ತು ಎಂದು ಅವರು ಹೇಳಿದ್ದಾರೆ.

ನಾವು ನಮ್ಮ ಮಟ್ಟದಲ್ಲಿ ಅತ್ಯುತ್ತಮವಾಗಿ ಪ್ರಯತ್ನಿಸಿದ್ದೇವೆ ಮತ್ತು ತೆಲಂಗಾಣ ಸರ್ಕಾರವನ್ನು ವಿನಂತಿಸಿದ್ದೇವೆ. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿದ್ದಕ್ಕೆ ನಾವೇನು ಮಾಡಲು ಸಾದ್ಯ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿದರು.



Join Whatsapp