ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಹಗರಣಗಳ ಕುರಿತಾದ ದಾಖಲೆಗಳನ್ನು ನೀಡಿದರೆ, ಅಂದು ಮುಖ್ಯಮಂತ್ರಿ ಮತ್ತು ಸಚಿವರಾಗಿದ್ದವರ ವಿರುದ್ಧ ರಾಹುಲ್ ಗಾಂಧಿ ಕ್ರಮ ಕೈಗೊಳ್ಳಬಹುದೇ ಎಂಬ ಬೊಮ್ಮಾಯಿಯವರ ಪ್ರಶ್ನೆಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನಿಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ರೀ ಸ್ವಾಮಿ ಬೊಮ್ಮಾಯಿ ಅವರೇ, ನಿಮ್ಮ ಮಾತಿಗೆ ಅಳಬೇಕೊ ನಗಬೇಕೋ ತಿಳಿಯುತ್ತಿಲ್ಲ. ದಾಖಲೆ ಇದ್ದರೆ ಸಿಐಡಿಗೋ, IT, ED, ಸಿಬಿಐಗೋ ಕೊಡದೇ ರಾಹುಲ್ ಗಾಂಧಿ ಒಪ್ಪಿಗೆಗೆ ಕಾಯುತ್ತಿದ್ದೀರಾ ಎಂದು ಬಿಜೆಪಿ ಸರಕಾರವನ್ನು ವ್ಯಂಗ್ಯವಾಗಿ ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರು, ಎಲ್ಲಾ ನೇಮಕಾತಿಗಳನ್ನು ಮತ್ತು ಹಗರಣಗಳನ್ನು ತನಿಖೆಗೆ ಒಪ್ಪಿಸಿ ಎಂದು ಅಂದೇ ಹೇಳಿಲ್ಲವೇ? ಯಾಕೆ ದಮ್ಮು ತಾಕತ್ತು ಇಲ್ಲವೇ ಬೊಮ್ಮಾಯಿಯವರೇ ಎಂದು ಪ್ರಶ್ನಿಸಿದೆ.