ಬಿಲ್ಕಿಸ್ ಬಾನು ಪ್ರಕರಣ: ಪೆರೋಲ್ ನಲ್ಲಿ ಬಂದಿದ್ದಾಗ ಮಹಿಳೆಯ ಘನತೆಗೆ ಧಕ್ಕೆ ತಂದಿದ್ದ ಅಪರಾಧಿ ಮಿಥಿಲೇಶ್ 

Prasthutha|

ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾದ 11 ಅಪರಾಧಿಗಳ ಪೈಕಿ ಮಿಥಿಲೇಶ್ ಚಿಮನ್ಲಾಲ್ ಎಂಬಾತ 2020ರಲ್ಲಿ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ವೇಳೆ ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದರು ಎಂದು ನ್ಯಾಯಾಲಯ ತಿಳಿಸಿದೆ.

- Advertisement -

ಅಪರಾಧಿ ಮಿಥಿಲೇಶ್ ಗೆ ಸೆರೆವಾಸದ ವೇಳೆ ಒಟ್ಟು 954 ರಜೆಗಳನ್ನು (ಪೆರೋಲ್, ಇತ್ಯಾದಿ) ನೀಡಲಾಗಿತ್ತು. ಆತನ ಮೇಲೆ ಹಲವು ಪ್ರಕರಣಗಳಿರುವುದು ಪತ್ತೆಯಾಗಿದೆ.

ನಿರಂತರವಾಗಿ ಸ್ತ್ರೀ ವಿರೋಧಿ ಧೋರಣೆ ಹೊಂದಿರುವ ವ್ಯಕ್ತಿಯನ್ನು ಅದು ಹೇಗೆ ಸನ್ನಡತೆ ಆಧಾರದಲ್ಲಿ ಸರಕಾರ ಬಿಡುಗಡೆ ಮಾಡಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.



Join Whatsapp