ಅನ್ಯಜಾತಿಯ ಯುವಕನೊಂದಿಗೆ ಪ್ರೀತಿ: ಪ್ರಿಯಕರನ ಜೊತೆಗೆ ಮಗಳನ್ನೂ ಕೊಲೆ ಮಾಡಿದ ತಂದೆ!

Prasthutha|

ಬಾಗಲಕೋಟೆ: ಅನ್ಯಜಾತಿಯ ಯುವಕನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ, ತಂದೆ ಮತ್ತು ಇತರ ಆರು ಮಂದಿ ಸೇರಿ ಮಗಳು ಮತ್ತು ಆಕೆಯ ಪ್ರಿಯಕರನನ್ನು ಕೊಂದು ನದಿಗೆ ಎಸೆದ ದುರ್ಘಟನೆ ತಾಲ್ಲೂಕಿನ ಬೇವಿನಮಟ್ಟಿಯಲ್ಲಿ ನಡೆದಿದೆ.

- Advertisement -

ಪ್ರಮುಖ ಆರೋಪಿ ಬಾಲಕಿಯ ತಂದೆ ಪರಸಪ್ಪ ಕರಡಿ ಸೇರಿದಂತೆ ನಾಲ್ವರು ತಲೆಮರೆಸಿಕೊಂಡಿದ್ದು, ರವಿ ಹುಲ್ಲನ್ನವರ, ಹನಮಂತ ಮಲ್ಲಾಡದ ಹಾಗೂ ಬೀರಪ್ಪ ದಳವಾಯಿ ಮುಂತಾದ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ತನಿಖೆ ವೇಳೆ ಕುರುಬ ಸಮಾಜದ ಯುವತಿಯಾಗಿದ್ದ ಮುನೀಶ್ವರಿ( ಹೆಸರು ಬದಲಾಯಿಸಲಾಗಿದೆ) ಮತ್ತು ವಾಲ್ಮೀಕಿ ಸಮಾಜದ ವಿಶ್ವನಾಥ ನೆಲಗಿ ಪರಸ್ಪರ ಪ್ರೀತಿಸುತ್ತಿದ್ದು, ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಆರೋಪಿಗಳು ಇಬ್ಬರನ್ನೂ ಕೊಂದು ಕೃಷ್ಟಾ ನದಿಗೆ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಹತ್ಯೆಗೆ ಸಂಬಂಧಪಟ್ಟಂತೆ ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ



Join Whatsapp