ಸ್ಫೋಟಕ ವಸ್ತು ವಶಪಡಿಸಿದ ಪ್ರಕರಣದಲ್ಲಿ ಸಮರ್ಪಕ ಪುರಾವೆಗಳ ಕೊರತೆ: 13 ವರ್ಷಗಳ ಬಳಿಕ ಐವರ ಬಿಡುಗಡೆ

Prasthutha|

ಕೊಚ್ಚಿ: ಸ್ಫೋಟಕ ವಸ್ತುಗಳನ್ನು ವಶಪಡಿಸಿದ ಪ್ರಕರಣ ಹಾಗೂ ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ ತಡಿಯಂತವಿಡೆ ನಜೀರ್ ಮತ್ತು ಶರಫುದ್ದೀನ್ ಸೇರಿದಂತೆ ಇತರ ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಕೊಚ್ಚಿ ವಿಶೇಷ ನ್ಯಾಯಾಲಯವು 13 ವರ್ಷಗಳ ಬಳಿಕ ಇಂದು ಬಿಡುಗಡೆಗೊಳಿಸಿದೆ.

- Advertisement -

ಆರೋಪಿಗಳಲ್ಲಿ ಸ್ಫೋಟಕ ವಸ್ತುಗಳು ಸ್ವಾಧೀನದಲ್ಲಿತ್ತು ಎಂಬುವುದಕ್ಕೆ ಸಮರ್ಪಕವಾದ ಪುರಾವೆಗಳಿಲ್ಲದ ಕಾರಣ ಆರೋಪಿಗಳು ಬಿಡುಗಡೆಗೆ ಅರ್ಹರಾಗಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಕೆ.ಕಮನೀಸ್ ಹೇಳಿದ್ದಾರೆ.

ಆರೋಪಿಗಳ ಮೇಲಿರುವ ಆರೋಪಕ್ಕೆ ಕುರಿತಂತೆ ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಪ್ರಕರಣವನ್ನು ಮುಂದುವರಿಸುವುದು ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

- Advertisement -

ಆರೋಪಿಗಳು, ದೇಶಾದ್ಯಂತ ಸ್ಫೋಟಗಳನ್ನು ನಡೆಸಿ, ಭಯದ ವಾತಾವರಣ ನಿರ್ಮಿಸಲು ಮುಂದಾಗಿದ್ದರು. ತಮ್ಮ ಈ ಉದ್ದೇಶಕ್ಕಾಗಿ ಅಕ್ರಮವಾಗಿ ಹಲವು ಬಗೆಯ ಸ್ಫೋಟಕ ವಸ್ತುಗಳನ್ನು ಹೊಂದಿದ್ದರು. ಐದನೇ ಆರೋಪಿಯ ಮನೆಯಲ್ಲಿ ಅದನ್ನು ಬಚ್ಚಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು. 2009ರಲ್ಲಿ ಶೋಧ ನಡೆಸಿದ್ದ ಪೊಲೀಸ್ ತಂಡ, ಸ್ಫೋಟಕ ಸಾಮಗ್ರಿಗಳು ತಮಗೆ ಪತ್ತೆಯಾಗಿವೆ ಎಂದೂ ಹೇಳಿಕೊಂಡಿದ್ದರು. ಇದಕ್ಕೆ ಸಮರ್ಪಕವಾದ ಪುರಾವೆಗಳು ಇನ್ನು ದೊರಕದ ಕಾರಣ ಇಂದು ಬಿಡುಗಡೆಗೊಂಡಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡ ಸ್ಫೋಟಕ ವಸ್ತುಗಳನ್ನು ಸಂಬಂಧಪಟ್ಟ ಆರೋಪಿಗಳು ಹೊಂದಿದ್ದಾರೆ ಎಂದು ಎತ್ತಿ ತೋರಿಸುವ ಯಾವುದೇ ಪುರಾವೆಗಳಿಲ್ಲ. ಆರೋಪಿಗಳು ಸ್ಫೋಟಕ ವಸ್ತುಗಳನ್ನು ಹೊಂದಿದ್ದರು ಎಂಬ ವಾದವನ್ನು ಸಮರ್ಥಿಸುವ ದಾಖಲೆಗಳೂ ಲಭ್ಯವಾಗಿಲ್ಲ ಎನ್ನಲಾಗಿದೆ.



Join Whatsapp