ಜಯಲಲಿತಾ ಸಾವು ಪ್ರಕರಣ: ಸಮಗ್ರ ತನಿಖೆ ನಡೆಸುವಂತೆ ಆರುಮುಗಸ್ವಾಮಿ ಆಯೋಗ ಶಿಫಾರಸು

Prasthutha|

ಚೆನ್ನೈ: 2016 ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಎ.ಆರುಮುಗಸ್ವಾಮಿ ತನಿಖಾ ಆಯೋಗವು ಶಶಿಕಲಾ, ಮಾಜಿ ಸಚಿವೆ ಹಾಗೂ ಮಾಜಿ ಆರೋಗ್ಯ ಕಾರ್ಯದರ್ಶಿ ವಿರುದ್ಧ ತನಿಖೆಗೆ ಆದೇಶಿಸಿದೆ.

- Advertisement -

ಜಯಲಲಿತಾ ಅವರ ಸಾವು ಮತ್ತು 2018ರಲ್ಲಿ ರಾಜ್ಯದ ತೂತುಕುಡಿಯಲ್ಲಿ ನಡೆದ ಪೊಲೀಸ್ ಗೋಲಿಬಾರ್ ಸುತ್ತಲಿನ ಸನ್ನಿವೇಶಗಳನ್ನು ಪರಿಶೀಲಿಸುವ ಪ್ರತ್ಯೇಕ ತನಿಖಾ ಆಯೋಗಗಳ ವರದಿಗಳನ್ನು ತಮಿಳುನಾಡು ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿತು

ಜಯಲಲಿತಾ ಅವರ ಸಾವಿನ ಬಗ್ಗೆ ಎ.ಆರುಮುಗಸ್ವಾಮಿ ಆಯೋಗ ತನಿಖೆ ನಡೆಸಿತು.

- Advertisement -

ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ, ಮಾಜಿ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್, ಡಾ.ಶಿವಕುಮಾರ್ (ಜಯಲಲಿತಾ ಅವರ ಆಪ್ತ ವೈದ್ಯ ಮತ್ತು ಶಶಿಕಲಾ ಅವರ ಸಂಬಂಧಿ) ಮತ್ತು ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದ ಆಯೋಗ, ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದೆ.

2016ರ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಆಸ್ಪತ್ರೆಗೆ ದಾಖಲಾದ ಮತ್ತು ಅವರಿಗೆ ನೀಡಲಾದ ಚಿಕಿತ್ಸೆ ಅಂಶಗಳನ್ನು ಒಳಗೊಂಡ ವರದಿಯನ್ನು ನ್ಯಾಯಮೂರ್ತಿ ಎ.ಆರುಮುಗಸ್ವಾಮಿ ಅವರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸಲ್ಲಿಸಿದ ಎರಡು ದಿನಗಳ ನಂತರ ಆಗಸ್ಟ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಆಯೋಗದ ವರದಿಯನ್ನು ಮಂಗಳವಾರ ತಮಿಳುನಾಡು ವಿಧಾನಸಭೆಯ ಮುಂದೆ ಮಂಡಿಸಲಾಯಿತು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯ ಸಾವಿನ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನ ವೈದ್ಯಕೀಯ ಮಂಡಳಿಯನ್ನು ರಚಿಸಿತ್ತು. ಮಂಡಳಿಯು ತನ್ನ ಅಂತಿಮ ವರದಿಯನ್ನು ಈ ವರ್ಷದ ಆರಂಭದಲ್ಲಿ ನ್ಯಾಯಮೂರ್ತಿ ಎ.ಆರುಮುಗಸ್ವಾಮಿ ಆಯೋಗಕ್ಕೆ ಸಲ್ಲಿಸಿತು.



Join Whatsapp