ಕೊಲಿಜಿಯಂ ವ್ಯವಸ್ಥೆಯಿಂದ ಜನರು ಸಂತಸಗೊಂಡಿಲ್ಲ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು

Prasthutha|

ನವದೆಹಲಿ: ಕೊಲಿಜಿಯಂ ವ್ಯವಸ್ಥೆಯಿಂದ ದೇಶದ ಜನರು ಸಂತಸಗೊಂಡಿಲ್ಲ. ನ್ಯಾಯಾಧೀಶರನ್ನು ನೇಮಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಹೇಳಿದ್ದು, ನ್ಯಾಯಾಧೀಶರ ನೇಮಕದಲ್ಲಿ ಸರ್ಕಾರ ಮತ್ತು ನ್ಯಾಯಾಂಗದ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯ ಬೆಳಕಿಗೆ ಬಂದಿದೆ.

- Advertisement -


ಜನರು ನಾಯಕರ ನಡುವಿನ ರಾಜಕೀಯವನ್ನು ಯಾವಾಗಲೂ ನೋಡುತ್ತಿರುತ್ತಾರೆ. ಆದರೆ ನ್ಯಾಯಾಧೀಶರನ್ನು ನೇಮಕ ಮಾಡುವಾಗ ನ್ಯಾಯಾಂಗದೊಳಗೆ ನಡೆಯುತ್ತಿರುವ ರಾಜಕೀಯ ಸಾಮಾನ್ಯ ಜನರಿಗೆ ತಿಳಿದಿಲ್ಲ. ಈ ದೇಶದ ವ್ಯವಸ್ಥೆ ಪಾರದರ್ಶಿಕವಾಗಿಲ್ಲ ಎಂದು ಅವರು ತಿಳಿಸಿದರು.


ಆರೆಸ್ಸೆಸ್’ನ ಮುಖವಾಣಿ ಪಾಂಚಜನ್ಯ ವಾರಪತ್ರಿಕೆ ಆಯೋಜಿಸಿದ್ದ ಸಬರಮತಿ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಅರ್ಧದಷ್ಟು ನ್ಯಾಯಾಧೀಶರು ಪಾಲ್ಗೊಂಡಿದ್ದ ಆರ್ಎಸ್ಎಸ್ ಪ್ರಕಟಿಸುವ ‘ಪಾಂಚಜನ್ಯ’ ವಾರಪತ್ರಿಕೆ ಆಯೋಜಿಸಿದ್ದ ‘ಸಬರಮತಿ ಸಂವಾದ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

- Advertisement -


ನ್ಯಾಯಾಧೀಶರು ಅರ್ಧದಷ್ಟು ಸಮಯವನ್ನು ನೇಮಕಾತಿ ನಿರ್ಧಾರದಲ್ಲಿ ನಿರತರಾಗಿರುವುದು ಗಮನಕ್ಕೆ ಬಂದಿದೆ ಎಂದು ಕೇಂದ್ರ ಕಾನೂನು ಸಚಿವ ರಿಜಿಜು ಹೇಳಿದ್ದಾರೆ. ಇದರಿಂದಾಗಿ ನ್ಯಾಯವನ್ನು ತಲುಪಿಸುವ ಅವರ ಪ್ರಾಥಮಿಕ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.



Join Whatsapp