ಹೈದರಾಬಾದ್ | ಮಸೀದಿ ಆವರಣಕ್ಕೆ ಅಕ್ರಮ ಪ್ರವೇಶ; ಅಪರಿಚಿತರ ವಿರುದ್ಧ ಪ್ರಕರಣ ದಾಖಲು

Prasthutha|

ಹೈದರಾಬಾದ್: ರಾಯದುರ್ಗದಲ್ಲಿರುವ ಮಸೀದಿ ಇ ಕುತುಬ್ ಶಾಹಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅನಾಹುತ ಸೃಷ್ಟಿಸಿದ ಆರೋಪದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಮಸೀದಿ ಸಮಿತಿಯ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 447, 427 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭಾನುವಾರ ಸುಮಾರು 100 – 150 ದುಷ್ಕರ್ಮಿಗಳ ಗುಂಪೊಂದು ಕಂಪೌಂಡ್ ಗೋಡೆಯನ್ನು ಒಡೆದು ಮಸೀದಿ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿತ್ತು. ಒಳನುಗ್ಗುವವರ ನಡೆಯನ್ನು ಮಸೀದಿ ಸಮಿತಿ ಮತ್ತು ಇತರ ಮುಸ್ಲಿಮರು ವಿರೋಧಿಸಿ ಪೊಲೀಸರನ್ನು ಸಂಪರ್ಕಿಸಿದ್ದರು.

- Advertisement -

ಮಸೀದಿ ಆವರಣದಲ್ಲಿ ದುಷ್ಕರ್ಮಿಗಳ ತಂಡ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಕುರಿ ಬಲಿಕೊಟ್ಟಿದೆ ಎಂದು ಆರೋಪಿಸಲಾಗಿದೆ. ಈ ಸುದ್ದಿ ತಿಳಿದ ತಕ್ಷಣ ಮುಸ್ಲಿಮರು ಅಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರೆ, ಹಿಂದೂಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸೇರಿದರು. ಈ ಕುರಿತು ಮಾಹಿತಿ ಪಡೆದ ರಾಯದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ಘರ್ಷಣೆ ನಡೆಯದಂತೆ ತಡೆದಿದ್ದರು.

ಘಟನೆಯ ಬಳಿಕ ಕುತುಬ್ ಶಾಹಿ ಮಸೀದಿಯ ಸಮಸ್ಯೆಯನ್ನು ಬಗೆಹರಿಸುವಂತೆ ಸೈಬರಾಬಾದ್ ಪೊಲೀಸರು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಮತ್ತು ರಂಗಾ ರೆಡ್ದಿ ಜಿಲ್ಲೆಯ ಕಂದಾಯ ಅಧಿಕಾರಿಗಳ ನೆರವನ್ನು ಕೋರಿದ್ದರು.



Join Whatsapp