ಕೊಲ್ಕತ್ತಾ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೀದಿ ಪ್ರತಿಭಟನೆಯ ಭಾಷೆಯೊಂದೇ ಅರ್ಥವಾಗುತ್ತದೆ. ಈಗ ಅದೇ ಸರ್ಕಾರ ಪ್ರತಿಭಟನಾಕಾರರೊಂದಿಗೆ ಚರ್ಚೆಗೆ ಉತ್ಸಾಹಭರಿತವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಹೊಸ ಕೃಷಿ ಕಾನೂನುಗಳ ಕುರಿತು ಕೇಂದ್ರ ಸಚಿವರೊಂದಿಗೆ ರೈತರು ಸಭೆ ನಡೆಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
“ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿದಾಗ, ಕಾಂಗ್ರೆಸ್ ರೈತರ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ಬಿಜೆಪಿ ಆರೋಪಿಸಿತು. ಮಸೂದೆಗಳನ್ನು ತೆರವುಗೊಳಿಸುವ ಮುನ್ನ ಹೆಚ್ಚಿನ ಸಮಾಲೋಚನೆ ಮತ್ತು ಪರಿಶೀಲನೆ ನಡೆಸುವಂತೆ ಕೋರಿದಾಗ ಕಾಂಗ್ರೆಸ್ ನ ಮನವಿ ತಿರಸ್ಕರಿಸಲಾಯಿತು. ಕಾಯ್ದೆಯನ್ನು ವಿರೋಧಿಸಿದ ನಮ್ಮ ಸಂಸದರನ್ನು ಸಂಸತ್ತಿನಿಂದಲೇ ಅಮಾನತುಗೊಳಿಸಲಾಯಿತು” ಎಂದು ಅಧೀರ್ ರಂಜನ್ ಅವರು ಕಿಡಿಕಾರಿದ್ದಾರೆ.