ನವದೆಹಲಿ: ದೇಶದ ಬಲಿಷ್ಠ ಪಕ್ಷಗಳಲ್ಲೊಂದಾದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಚುನಾವಣೆಯು ಇಂದು (17 ಅಕ್ಟೋಬರ್) ನಡೆಯಲಿದೆ.
ಕಾಂಗ್ರೆಸ್ ಪಕ್ಷದ ಸ್ಥಾಪನೆ ಬಳಿಕ ಆರನೇ ಬಾರಿಗೆ ಚುನಾವಣೆ ಮೂಲಕ ಹೊಸ ಅಧ್ಯಕ್ಷರ ಆಯ್ಕೆಗೆ ಮುಂದಾಗಿದೆ. ಈ ಚುನಾವಣೆಗೆ ಇಂದು (ಅಕ್ಟೋಬರ್ 17) ದಿನಾಂಕ ನಿಗದಿಯಾಗಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಹೊರಬೀಳಲಿದೆ.
137 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಯು 1939, 1950, 1977, 1997 ಹಾಗೂ 2000ನೇ ಇಸವಿಯಲ್ಲಿ ನಡೆದಿದ್ದವು. ಇದು 6 ನೇ ಬಾರಿಯ ಚುನಾವಣೆಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಶಶಿ ತರೂರ್ ಈ ಚುನಾವಣಾ ಕಾಳಗದಲ್ಲಿದ್ದು, ಪಕ್ಷದ 9 ಸಾವಿರದಷ್ಟು ಪ್ರತಿನಿಧಿಗಳು ಮತದಾನ ಮಾಡಲು ಅರ್ಹರಾಗಿದ್ದಾರೆ ಎಂದಿದ್ದಾರೆ.