ಮಡಿಕೇರಿ: ಕೆಸಿಸಿ ಟ್ರಸ್ಟ್ (ರಿ) ಇದರ ಕೆಸಿಸಿ ಉಮ್ರಾ ಸರ್ವೀಸ್ ನೂತನ ಕಚೇರಿ ಮಡಿಕೇರಿ ಮಹದೇವಪೇಟೆಯಲ್ಲಿ ಶುಕ್ರವಾರ ಶುಭಾರಂಭಗೊಂಡಿತು.
ಕಚೇರಿಯನ್ನು ಮಡಿಕೇರಿ ಬದ್ರಿಯಾ ಜುಮಾ ಮಸೀದಿ ಖತೀಬ್ ಫಝಲುರ್ರಹ್ಮಾನ್ ಸಖಾಫಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅರ್ಥಿಕವಾಗಿ ಹಿಂದುಳಿದ ಬಡ ಜನರಿಗೆ ನೆರವಾಗುವ ದೃಷ್ಟಿಯಿಂದ ಆರಂಭವಾದ ಕೆಸಿಸಿ ಉಮ್ರಾ ಯೋಜನೆ ಕೊಡಗು ಜಿಲ್ಲೆಗೂ ವ್ಯಾಪಿಸಿರುವುದು ಸಂತೋಷ ತಂದಿದೆ. ಈ ಯೋಜನೆಯ ಉಪಯೋಗವನ್ನು ಎಲ್ಲರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಮಡಿಕೇರಿ ಎನ್.ಎಂ.ಜುಮಾ ಮಸೀದಿ ಖತೀಬ್ ರಫೀಕ್ ಸಅದಿ, ಮಡಿಕೇರಿ ನಗರಸಭೆ ಸದಸ್ಯ ಮುಹ್ಸಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕೆಸಿಸಿ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಬ್ದುರ್ರಹ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ತಿಂಗಳಿಗೆ 2000ರೂ. ಪಾವತಿಸಿ ಪವಿತ್ರ ಉಮ್ರಾ ನಿರ್ವಹಿಸುವ ನೂತನ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಜಾಮೀಯಾ ಮಸೀದಿ ಖತೀಬ್, ಮಡಿಕೇರಿ ನಗರಸಭೆ ಸದಸ್ಯರಾದ ನೀರಜ್ ಅರ್ಶಾದ್, ಬಶೀರ್, ಮನ್ಸೂರ್, ಕೆಸಿಸಿ ಟ್ರಸ್ಟ್ ಸದಸ್ಯರಾದ ಅಲ್ತಾಫ್, ವಾಸಿಂ ಅಕ್ರಂ, ಇಬ್ರಾಹಿಂ ಖಲೀಲ್ ಮತ್ತಿತರರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8884333630, 9483132020 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.