ಮಂಗಳೂರು: ವಿವಿಧ ಸಮಾನ ಮನಸ್ಕ ಸಂಘಟನೆಗಳು ಸುರತ್ಕಲ್ ಟೋಲ್ ರದ್ದತಿಗಾಗಿ ಅಕ್ಟೋಬರ್ 18ರಂದು ನಡೆಸುವ ಪ್ರತಿಭಟನೆ ಮತ್ತು ಮುತ್ತಿಗೆ ಕಾರ್ಯಕ್ರಮಕ್ಕೆ ದ ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ನೀಡಲಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.
ಅಂದು ಸರ್ವ ನಾಗರಿಕರು ಈ ಪ್ರತಿಭಟನೆ ಮತ್ತು ಮುತ್ತಿಗೆಯಲ್ಲಿ ಪಾಲ್ಗೊಳ್ಳಬೇಕು. ಈಗಾಗಲೇ ಸರಕಾರದಿಂದ ಟೋಲ್ ತೆರವಿನ ಭರವಸೆ ನೀಡಲಾಗಿದ್ದು, ಅಕ್ರಮ ಟೋಲ್ ಸಂಗ್ರಹವನ್ನು ಹೆದ್ದಾರಿ ಪ್ರಾಧಿಕಾರವು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.