ಬುಲ್ಡೋಜರ್ ನೀತಿಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತ ಝೈದ್ ಪಠಾಣ್ ಗೆ ಜಾಮೀನು

Prasthutha|

ನವದೆಹಲಿ: ಮಧ್ಯಪ್ರದೇಶದ ಬುಲ್ಡೋಜರ್ ನೀತಿಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಬಂಧಿಸಿದ್ದ ಸಾಮಾಜಿಕ ಕಾರ್ಯಕರ್ತ ಝೈದ್ ಪಠಾಣ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.

- Advertisement -

ಈ ವರ್ಷದ ಏಪ್ರಿಲ್ ನಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರದ ನಂತರ ಮಧ್ಯಪ್ರದೇಶದ ಖರ್ಗೋನ್ ನಲ್ಲಿ ಮುಸ್ಲಿಮರ ಮನೆಗಳನ್ನು ನೆಲಸಮಗೊಳಿಸುವುದರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಝೈದ್ ಪಠಾಣ್ ಅವರಿಗೆ ಸುಮಾರು ಎರಡು ತಿಂಗಳ ಜೈಲುವಾಸದ ನಂತರ ಜಾಮೀನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಖರ್ಗೋನ್ ನಲ್ಲಿ ರಾಮನವಮಿ ಮೆರವಣಿಗೆಯ ಸಮಯದಲ್ಲಿ ಹಿಂಸಾಚಾರ ವರದಿಯಾದ ನಂತರ, ಸ್ಥಳೀಯ ಆಡಳಿತವು ಅಂಗಡಿಗಳು ಮತ್ತು ಕಟ್ಟಡಗಳನ್ನು ನೆಲಸಮ ಮಾಡಿತ್ತು. ಅಲ್ಲದೆ ಅವುಗಳಲ್ಲಿ ಹೆಚ್ಚಿನವು ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಕುಟುಂಬಗಳ ಒಡೆತನದಲ್ಲಿದ್ದವು. ಸುಮಾರು 80 ಜನರನ್ನು ಬಂಧಿಸಲಾಗಿತ್ತು.



Join Whatsapp