ಹಿಜಾಬ್ ವಿವಾದ: ನ್ಯಾ. ಧುಲಿಯಾ ಅವರ ನಿಲುವನ್ನು ಸ್ವಾಗತಿಸಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ

Prasthutha|

ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಅಭಿಪ್ರಾಯವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸ್ವಾಗತಿಸಿದೆ.

- Advertisement -

ಕುರಿತು ಪ್ರತಿಕ್ರಯಿಸಿರುವ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಅವರು ‘ಮಹಿಳೆಯರ ಶಿಕ್ಷಣದ ಹಕ್ಕನ್ನು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಎತ್ತಿ ಹಿಡಿದಿದ್ದಾರೆ. ಹೆಣ್ಣು ಮಗುವಿಗೆ ಮನೆ ಒಳಗೆ ಅಥವಾ ಮನೆಯ ಹೊರಗೆ ಹಿಜಾಬ್ ಧರಿಸಲು ಅಧಿಕಾರ ಇದೆ. ಆ ಹಕ್ಕು ಶಾಲೆಯ ದ್ವಾರದ ಬಳಿ ಮೊಟಕುಗೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ಸುಧಾಂಶು ದುಲಿಯಾ ಅವರು ಹೇಳಿದ ಮಾತು ಜನವಾದಿ ಸಂಘಟನೆ ಅಭಿಪ್ರಾಯವನ್ನು ದೃಢೀಕರಿಸಿದಂತಾಗಿದೆ’ ಎಂದರು.

ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ವಿಸ್ತೃತ ಪೀಠವು ಮಳೆಯರ ಶಿಕ್ಷಣದ ಮೂಲಭೂತ ಹಕ್ಕನ್ನು ಮತ್ತು ಆಯ್ಕೆಯ ಹಕ್ಕನ್ನು ರಕ್ಷಿಸುವ ನೆಲೆಯಲ್ಲಿ ಬರುತ್ತದೆ ಎಂಬ ಆಶಾದಾಯಕವಾದ ನಿರೀಕ್ಷೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹೊಂದಿದೆ ಎಂದು ಮೀನಾಕ್ಷಿ ಬಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp