ಅಲಹಾಬಾದ್: ಪೋಕ್ಸೊ ಕಾಯ್ದೆಯಡಿ, ಅತ್ಯಾಚಾರ ಪ್ರಕರಣ ದಾಖಲಿಸಲಾದ ವ್ಯಕ್ತಿಗೆ ಅಲಹಾಬಾದ್ ಹೈಕೋರ್ಟ್ ಸಂತ್ರಸ್ತೆಯನ್ನು 15 ದಿನದೊಳಗೆ ಮದುವೆಯಾಗಬೇಕು ಮತ್ತು ಆಕೆಯ ಮಗುವನ್ನು (ಅತ್ಯಾಚಾರದಿಂದ ಜನಿಸಿದ) ತನ್ನ ಮಗುವಾಗಿ ಸ್ವೀಕರಿಸಬೇಕು ಎಂಬ ಷರತ್ತಿನೊಂದಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದೆ.
ಉತ್ತರ ಪ್ರದೇಶದ ಖಿರಿ ಜಿಲ್ಲೆಯವರಾದ ಒಬ್ಬ ವ್ಯಕ್ತಿಯ ವಿರುದ್ಧ ಐಪಿಸಿಯ ಸೆಕ್ಷನ್ 363, 366, 376 ಮತ್ತು ಪೋಕ್ಸೊ ಕಾಯ್ದೆಯ 3/4 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. FIR ಪ್ರಕಾರರ, 2022 ರ ಮಾರ್ಚ್ನಲ್ಲಿ ಬಾಲಕಿಗೆ 17 ವರ್ಷದವಳಿದ್ದಾಗ ಆರೋಪಿ ಆಮಿಷವೊಡ್ಡಿ ಅತ್ಯಾಚಾರವೆಸಗಿದ್ದನು.
ಈ ಪ್ರಕರಣದ ಜಾಮೀನು ಆದೇಶದಲ್ಲಿ, ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರ ಪೀಠವು, ಹಿಂದೂ ವಿಧಿವಿಧಾನಗಳು ಮತ್ತು ಆಚರಣೆಗಳಿಗೆ ಅನುಸಾರವಾಗಿ ಸಂತ್ರಸ್ತೆಯೊಂದಿಗೆ ಅತಯಚಾರಿ ವಿವಾಹವಾದರೆ, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಂತ್ರಸ್ತೆ ಮತ್ತು ಆಕೆಯ ತಂದೆಗೆ ಯಾವುದೇ ಅಭ್ಯಂತರವಿಲ್ಲ ಎಂಬ ಹೇಳಿಕೆಯ ನಂತರ ಆತನಿಗೆ ಜಾಮೀನು ನೀಡಿದೆ. ಆರೋಪಿಯು ತನ್ನ ಹೆಂಡತಿ ಮತ್ತು ಮಗುವಿಗೆ ಎಲ್ಲಾ ಹಕ್ಕುಗಳನ್ನು ನೀಡಬೇಕು ಎಂದು ನ್ಯಾಯಮೂರ್ತಿ ಆದೇಶಿಸಿದರು.