ಬೆಂಗಳೂರು: ಬೆಂಗಳೂರಿನಲ್ಲಿ ಅದಿತಿ ಅಹುಜಾ ಕಂಪೆನಿಯು ಆವಿಷ್ಕರಿಸಿದ ಇಡ್ಲಿ ವೆಂಡಿಂಗ್ ಮೆಷಿನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೊಬೈಲ್ ನಲ್ಲಿ ಮೆನು ಸೆಲೆಕ್ಟ್ ಮಾಡಿಕೊಂಡು ಮೆಷಿನಿಗೆ ಸ್ವೈಪ್ ಮಾಡಿದರೆ ಕೆಲ ನಿಮಿಷಗಳಲ್ಲಿಯೇ ಈ ಮೆಷಿನಿ ನಿಂದ ಬಿಸಿಬಿಸಿ ಇಡ್ಲಿ ಮತ್ತು ಚಟ್ನಿಯ ಪೊಟ್ಟಣ ಕೈಗೆ ಬರುತ್ತದೆ. ಹೋಟೆಲ್ ಮುಚ್ಚಿತು ಎಂದೋ, ಆನ್ಲೈನ್ ಸರ್ವೀಸ್ ಇಲ್ಲವೆಂದೋ ಬೇಸರಿಸಬೇಕಿಲ್ಲ. 24 ಗಂಟೆಗಳ ಕಾಲವೂ ಇಲ್ಲಿ ಇಡ್ಲಿ ಚಟ್ನಿ ಲಭ್ಯವಿದೆ. ಇಡ್ಲಿ ಮಾತ್ರವಲ್ಲದೆ ವಡಾ, ಉಪ್ಪಿಟ್ಟು ಮುಂತಾದ ಖಾದ್ಯಗಳೂ ಇದರಲ್ಲಿ ಲಭ್ಯವಿದೆ.
Idli ATM in Bangalore… pic.twitter.com/NvI7GuZP6Y
— B Padmanaban ([email protected]) (@padhucfp) October 13, 2022
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರನ್ನು ಬಹುವಾಗಿ ಆಕರ್ಷಿಸಿದೆ