►ತಾವು ಹೆಸರಿಸಿರುವ ವ್ಯಕ್ತಿಯ ಮನೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ: ಎನ್.ಶಶಿಕುಮಾರ್ ಸ್ಪಷ್ಟನೆ
ಬೆಂಗಳೂರು: SDPI ಎಂಬ ರಾಜಕೀಯ ಪಕ್ಷದ ನಾಯಕರನ್ನು ಗುರಿಪಡಿಸಲು ನಿಮಗೆ ಆದೇಶ ಬರುತ್ತಿರುವುದು ಎಲ್ಲಿಂದ? ಉದ್ದೇಶ ಏನು? ಎಂದು SDPI ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಪ್ರಶ್ನಿಸಿದ್ದಾರೆ.
ಅದೇ ರೀತಿ ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್ ಟ್ವೀಟ್ ಮಾಡಿ, SDPI ಪಕ್ಷದ ನಾಯಕರ ಮನೆ ಮೇಲೆ ಪೊಲೀಸ್ ದಾಳಿ ಮಾಡಲು ಎಲ್ಲಿಂದ ಬಂದ ಯಾರ ಆದೇಶದ ಮೇಲೆ ದಾಳಿ ಮಾಡಲಾಗುತ್ತಿದೆ ಎಂಬ ಸತ್ಯವನ್ನು ಎಡಿಜಿಪಿ ಅವರು ಸಮಾಜದ ಮುಂದೆ ತೆರೆದಿಡಿ, ಮತ್ತು ಪೊಲೀಸ್ ಇಲಾಖೆಯಲ್ಲಿನ ಅನುಮಾನವನ್ನು ಹೊಗಲಾಡಿಸಿ ಎಂದು ಆಗ್ರಹಿಸಿದ್ದಾರೆ.
ಆದರೆ ಇದನ್ನು ನಿರಾಕರಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ರಿಟ್ವೀಟ್ ಮಾಡಿ, ತಾವು ಶೇರ್ ಮಾಡಿರುವ ಮಾಹಿತಿ ತಪ್ಪಾಗಿದ್ದು , ತಾವು ಹೆಸರಿಸಿರುವ ವ್ಯಕ್ತಿಯ ಮನೆಯ ಮೇಲೆ ಯಾವುದೇ ದಾಳಿ ನಡೆದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.