ಬಾಬಾಬುಡನ್ ಗಿರಿ ‘ದತ್ತ ಪೀಠ’ಕ್ಕೆ ಅರ್ಚಕರನ್ನು ನೇಮಿಸಲು ಶ್ರೀರಾಮ ಸೇನೆ ಆಗ್ರಹ

Prasthutha|

ಚಿಕ್ಕಮಗಳೂರು: ನವೆಂಬರ್ 13ರೊಳಗೆ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಶ್ರೀರಾಮ ಸೇನೆ ಆಗ್ರಹಿಸಿದೆ.

- Advertisement -

ನವೆಂಬರ್ 13ರೊಳಗೆ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ಮುಖಂಡರೊಬ್ಬರು ವೀಡಿಯೋ ಮೂಲಕ ಎಚ್ಚರಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತ ಪೀಠದ ವಿಚಾರದಲ್ಲಿ ಕಳೆದ 18 ವರ್ಷಗಳಿಂದ ಶ್ರೀರಾಮ ಸೇನೆ ಹೋರಾಟ ಮಾಡುತ್ತಾ ಬಂದಿದ್ದು, ಪ್ರತಿಯೊಂದು ನ್ಯಾಯಾಲಯದಲ್ಲಿ ಶ್ರೀರಾಮ ಸೇನೆ ಅಥವಾ ಹಿಂದೂಗಳ ಪರವಾಗಿ ತೀರ್ಪು ಬಂದಿದೆ. ಆದರೆ ಇದುವರೆಗೂ ಅಲ್ಲಿಗೆ ಹಿಂದೂ ಅರ್ಚಕರನ್ನು ನೇಮಿಸಲಾಗಿಲ್ಲ. ನವೆಂಬರ್ 13ರೊಳಗೆ ದತ್ತ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸದಿದ್ದರೆ ಮುಂದೆ ನಡೆಯುವ ಎಲ್ಲಾ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಅವರು ಬೊಮ್ಮಾಯಿ ಸರ್ಕಾರವನ್ನು ಅವರು ಎಚ್ಚರಿಸಿದ್ದಾರೆ.

- Advertisement -

ಸರ್ಕಾರ ದತ್ತಾತ್ರೇಯ ಪೀಠದ ವಿಚಾರವನ್ನು ಕಡೆಗಣಿಸಿದರೆ ಅಥವಾ ಅದಕ್ಕೆ ನ್ಯಾಯ ನೀಡದಿದ್ದಲ್ಲಿ ನೀವು ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ಈ ಹಿಂದಿನ ಯಡಿಯೂರಪ್ಪ ಅವರನ್ನು ಎಚ್ಚರಿಸಿದ್ದೆವು. ಅದೇ ರೀತಿ ಆಗಿದೆ ಎಂದು ಅವರು ಹೇಳುತ್ತಿರುವುದು ವೀಡಿಯೋದಲ್ಲಿದೆ.

ನವೆಂಬರ್ 7 ರಿಂದ 13ರವರೆಗೆ ಶ್ರೀರಾಮ ಸೇನೆ ಬಾಬಾ ಬುಡನ್ ಗಿರಿಯಲ್ಲಿ ಶೋಭಾಯಾತ್ರೆಯನ್ನು ಆಯೋಜಿಸಿದೆ.



Join Whatsapp