ಬೆಂಗಳೂರು: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕಟ್ಟಡವೊಂದು ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ವೈಟ್ ಫೀಲ್ಡ್ ಬಳಿಯ ಹೂಡಿಯಲ್ಲಿ ನಡೆದಿದೆ.
ಬಿಹಾರ ಮೂಲದ ಕೂಲಿ ಕಾರ್ಮಿಕರಾದ ಝೈನುದ್ದೀನ್, ಹರ್ಮಾನ್ ಮೃತಪಟ್ಟಿದ್ದು, ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಓರ್ವ ನ ಸ್ಥಿತಿ ಗಂಭೀರವಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮೂವರನ್ನು ಕಟ್ಟಡದಿಂದ ಹೊರ ತೆಗೆದಿದ್ದಾರೆ. ಬಿಎಲ್ ಆರ್ ಕಂಪನಿಗೆ ಸೇರಿದ ಕಟ್ಟಡ ತೆರವು ಮಾಡಲಾಗುತ್ತಿತ್ತು.
ನಿನ್ನೆ ರಾತ್ರಿ ಮಳೆ ಬಂದ ಹಿನ್ನೆಲೆಯಲ್ಲಿ ಕಟ್ಟಡದ ಕೆಳಗಿನ ರೂಮ್ ನಲ್ಲಿ ಕಾರ್ಮಿಕರು ಮಲಗಿದ್ದರು. ರಾತ್ರಿ ಮಳೆಗೆ ಬಿಲ್ಡಿಂಗ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ವೇಳೆ ಕೆಳಗೆ ರೂಮ್ನಲ್ಲಿ ಮಲಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.ಈ ಕುರಿತು ಮಹಾದೇವಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.