ಮುಸ್ಲಿಂ ಸಮುದಾಯವನ್ನು ಸಂಪೂರ್ಣ ಬಹಿಷ್ಕರಿಸುವಂತೆ ಕರೆ ನೀಡಿದ ಬಿಜೆಪಿ ಸಂಸದ

Prasthutha|

ನವದೆಹಲಿ: ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ‘ಹಿಂದೂ ಮಹಾಸಭಾ’ ಕಾರ್ಯಕ್ರಮದಲ್ಲಿ ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ಮುಸ್ಲಿಂ ಸಮುದಾಯದ ಜನರನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -


ಮುಸ್ಲಿಮರು ದೆಹಲಿಯನ್ನು “ಮಿನಿ ಪಾಕಿಸ್ತಾನ”ವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ವಿಎಚ್ ಪಿಯ ಅಂತರರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವರ್ಮಾ ಮುಸ್ಲಿಂ ಸಮುದಾಯದ ಜನರನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ಕರೆನೀಡಿದರು.
ನೀವು ಅವರಿಗೆ ಪಾಠಕಲಿಸಲು ಉದ್ದೇಶಿಸಿದ್ದರೆ, ಮುಸ್ಲಿಂ ಸಮುದಾಯದ ಜನರಿಗೆ ಸೇರಿದಂತಹ ಸ್ಟಾಲ್ ಗಳು, ತರಕಾರಿ ಅಂಗಡಿಗಳು, ಮಾಂಸ ಮತ್ತು ರೆಸ್ಟೋರೆಂಟ್ ಗಳು ಸೇರಿದಂತೆ ಇಡೀ ಸಮುದಾಯವನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ಕರೆನೀಡಿದರು. ಅಲ್ಲದೆ ನಾವು ಅವರಿಂದ ಏನನ್ನೂ ಖರೀದಿಸುವುದಿಲ್ಲ. ನಾವು ಅವರಿಗೆ ಯಾವುದೇ ವೇತನವನ್ನು ನೀಡುವುದಿಲ್ಲ ಎಂದು ಎಲ್ಲರಿಗೂ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಕೇಳಿಕೊಂಡರು.


ಈ ತಿಂಗಳ ಆರಂಭದಲ್ಲಿ ಸುಂದರ್ ನಗ್ರಿ ಪ್ರದೇಶದಲ್ಲಿ ಮೂವರು ವ್ಯಕ್ತಿಗಳಿಂದ ಹತ್ಯೆಗೀಡಾದ ಮನೀಶ್ ಕುಮಾರ್ ಎಂಬ ವ್ಯಕ್ತಿಯ ಹತ್ಯೆಯನ್ನು ಪ್ರತಿಭಟಿಸಲು ವಿಎಚ್ ಪಿ ಮತ್ತು ಇತರ ಬಲಪಂಥೀಯ ಸಂಘಟನೆಗಳು ದೆಹಲಿಯ ಜಿಟಿಬಿ ನಗರದಲ್ಲಿ ಸಭೆ ಆಯೋಜಿಸಿದ್ದವು.



Join Whatsapp