ಕಾಲುಂಗುರಕ್ಕಾಗಿ ವೃದ್ಧೆಯ ಪಾದವನ್ನೇ ಕತ್ತರಿಸಿದ ದರೋಡೆಕೋರರು

Prasthutha|

ಜೈಪುರ: ಧರಿಸಿದ್ದ ಕಾಲುಂಗುರ ಕದಿಯಲಿಕ್ಕಾಗಿ ದರೋಡೆಕೋರರು 108 ವರ್ಷ ವಯಸ್ಸಿನ ವೃದ್ಧೆಯ ಪಾದವನ್ನೇ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ಜೈಪುರದಲ್ಲಿ ನಡೆದಿದೆ.

- Advertisement -

ಜೈಪುರದ ಜಮುನಾ ದೇವಿ ಗಂಭೀರ ಗಾಯಗೊಂಡ ಮಹಿಳೆಯಾಗಿದ್ದು, ಪ್ರಸ್ತುತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದರೋಡೆಗೆ ಬಂದ ತಂಡವೊಂದು ರವಿವಾರ ನಸುಕಿನ ವೇಳೆ ಜೈಪುರದಲ್ಲಿರುವ ವೃದ್ಧೆಯ ಮನೆಗೆ ಹೊಕ್ಕು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಜಾಲಾಡಿ ಬಳಿಕ ವೃದ್ಧೆಯ ಕಾಲ ಬೆರಳಿನಲ್ಲಿದ್ದ ಕಾಲುಂಗುರವನ್ನು ತೆಗೆಯಲು ಹರಿತವಾದ ಆಯುಧದಿಂದ ವೃದ್ಧೆಯ ಪಾದವನ್ನೇ ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ, ರಕ್ತದ ಮಡುವುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಲ್ಟಾ ಗೇಟ್ ಪೊಲೀಸ್ ಠಾಣಾಧಿಕಾರಿ ಮಖೇಶ್ ಕುಮಾರ್ ವಿವರ ನೀಡಿದ್ದಾರೆ.

- Advertisement -

ಮುಂಜಾನೆ ೫ ಗಂಟೆಯ ವೇಳೆ ದಾಳಿ ನಡೆದಿದ್ದು, ಕುಟುಂಬಸ್ಥರೆಲ್ಲರೂ ಗಾಢ ನಿದ್ರೆಯಲ್ಲಿದ್ದ ವೇಳೆ ದಾಳಿ ನಡೆದಿರುವುದು ಯಾರಿಗೂ ತಿಳಿದಿರಲಿಲ್ಲ. ವೃದ್ಧೆಯ ಮನೆಯವರು ಗುರುತು ಹಿಡಿಯುವ ಮುನ್ನವೇ ಕಳ್ಳರು ಕಾಲುಂಗುರ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ವಯಸ್ಸಿನ ಕಾರಣದಿಂದಾಗಿ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಕುಟುಂಬ ಸದಸ್ಯರಿಗೂ ಅವರು ಮಾತನಾಡುವುದು ಕೇಳಿಸುವುದಿಲ್ಲ” ಎಂದು ಅಳಿಯ ಗೋಪಾಲ್ ಮೀನಾ ಹೇಳಿದ್ದಾರೆ.

ಘಟನೆ ಕುರಿತು ಗಲ್ಟಾ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.



Join Whatsapp