ಕ್ಯಾಲಿಕಟ್: ಅನುಮಾನಾಸ್ಪವಾಗಿ ತಿರುಗುತ್ತಿದ್ದ ಬುರ್ಖಧಾರಿ ದೇವಸ್ಥಾನದ ಅರ್ಚಕನೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಆತಂಕಕಾರಿ ಘಟನೆ ಕೇರಳದ ಕೊಯಿಲಾಂಡಿಯಲ್ಲಿ ನಡೆದಿದೆ.
ಇತ್ತೀಚೆಗೆ ಕೇರಳದ ಕೊಯಿಲಾಂಡಿ ಜಂಕ್ಷನ್’ನಲ್ಲಿ ಬುರ್ಖಧಾರಿಯಾದ ಜಿಷ್ಣು ನಂಬೂದಿರಿ (28) ಎಂಬಾತ ಸ್ಥಳೀಯ ಆಟೋ ಚಾಲಕರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನದ ಅರ್ಚಕನಾದ ಜಿಷ್ಣು ನಂಬೂದಿರಿ ಎಂಬಾತ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ತಿರುಗುವುದನ್ನು ಕಂಡ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಸದ್ಯ ಆತನ ವಿರುದ್ಧ ಯಾವುದೇ ಅಪರಾಧ ಎಸಗಿರುವ ಕುರಿತು ದೂರು ದಾಖಲಾಗಿಲ್ಲ. ಹೀಗಾಗಿ ಆತನ ಸಂಬಂಧಿಕರು ಪೊಲೀಸ್ ಠಾಣೆಗೆ ಬಂದು ಆತನನ್ನು ಬಿಡಿಸಿಕೊಂಡು ಹೋಗಿದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಪ್ಪಯೂರು ಸಮೀಪದ ದೇವಸ್ಥಾನವೊಂದರಲ್ಲಿ ಅರ್ಚಕನಾಗಿ ಸೇವೆ ಸಲ್ಲಿಸುತ್ತಿರುವ ಜಿಷ್ಣು, ತನಗೆ ಚಿಕನ್ ಗುನ್ಯಾ ಕಾಯಿಲೆ ಇರುವ ಕಾರಣ ಬುರ್ಖಾ ಧರಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಅರ್ಚಕ ಜಿಷ್ಣು ಎಂಬಾತನಿಗೆ ಚಿಕನ್ ಗುನ್ಯಾ ಕಾಯಿಲೆಯ ಯಾವುದೇ ಲಕ್ಷಣಗಳು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿಲ್ಲ. ಸದ್ಯ ಆತನ, ಹೆಸರು, ವಿಳಾಸ ಮತ್ತು ಇತರ ವಿವರಗಳನ್ನು ಕಲೆಹಾಕಿ, ಪರಿಶೀಲನೆ ನಡೆಸಿದ ಬಳಿಕ ಆತನನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುರ್ಖಾ ಎಂಬುದು ಮುಸ್ಲಿಮ್ ಮಹಿಳೆಯರು ತಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚಲು ಉಪಯೋಗಿಸುವ ಒಂದು ಸಡಿಲವಾದ ವಸ್ತ್ರವಾಗಿದೆ.