ಜೆರುಸಲೇಮ್ | 24 ಗಂಟೆಗಳಲ್ಲಿ ಇಸ್ರೇಲ್ ಪಡೆಗಳಿಂದ ನಾಲ್ವರು ಫೆಲೆಸ್ತೀನಿಯನ್ನರ ಹತ್ಯೆ

Prasthutha|

ಜೆರುಸಲೇಮ್: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಒಟ್ಟು ನಾಲ್ಕು ಫೆಲೆಸ್ತೀನ್ ಹದಿಹರೆಯದ ನಾಗರಿಕರನ್ನು 24 ಗಂಟೆಗಳ ಅವಧಿಯಲ್ಲಿ ಇಸ್ರೇಲ್ ಸೈನಿಕರು ಹತ್ಯೆ ನಡೆಸಿರುವ ಘಟನೆ ವರದಿಯಾಗಿದೆ.

- Advertisement -

ಶನಿವಾರ ಬೆಳಗ್ಗೆ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ನಡೆದ ಸೇನಾ ದಾಳಿಯ ವೇಳೆ ಮಹ್ಮೂದ್ ಅಸ್ಸೋಸ್ ಮತ್ತು ಅಹ್ಮದ್ ದರಗ್ಮಾ ಎಂಬವರು ಇಸ್ರೇಲ್ ಸೈನಿಕರ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ ಶುಕ್ರವಾರ ಅಡೆಲ್ ಇಬ್ರಾಹಿಂ ದೌದ್ ಮತ್ತು ಮಹ್ದಿ ಲದಾದ್ವೆಹ್ ಎಂಬವರನ್ನು ಇಸ್ರೇಲ್ ಪಡೆಗಳು ಹತ್ಯೆಗೈದಿದ್ದವು.

- Advertisement -

ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಲು ಶಸ್ತ್ರಸಜ್ಜಿತ ವಾಹನಗಳು, ಬುಲ್ಡೋಝರ್, ಮಿಲಿಟರಿ ಹೆಲಿಕಾಪ್ಟರ್ ಮತ್ತು ಯುದ್ಧ ಡ್ರೋನ್’ಗಳನ್ನು ನಿಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ
ಪ್ರಸಕ್ತ ಇದೀಗ ಫೆಲೆಸ್ತೀನ್ ಪತ್ರಕರ್ತರು ಮತ್ತು ವೈದ್ಯಕಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಈ ಪ್ರದೇಶಲ್ಲಿ ರಕ್ಷಣೆ ಪಡೆಯುತ್ತಿದ್ದ ಪತ್ರಕರ್ತರು ಗುಂಪಿನ ಇಸ್ರೇಲ್ ಪಡೆಗಳು ಗುಂಡು ಹಾರಿಸಿದ್ದವು ಎಂದು ಫೆಲೆಸ್ತೀನ್ ಸುದ್ದಿ ಸಂಸ್ಥೆ ವಾಪಾ ತಿಳಿಸಿದೆ.

ಈ ವರ್ಷ ಇಸ್ರೇಲ್ ಪಡೆಸಿದ ಗುಂಡಿನ ದಾಳಿ ಯಿಂದಾಗಿ 165ಕ್ಕೂ ಅಧಿಕ ಫೆಲೆಸ್ತೀನ್ ಜನರು ಸಾವನ್ನಪ್ಪಿದ್ದು, ಗಾಝಾಪಟ್ಟಿಯಲ್ಲಿ 51 ಮಂದಿ ಮತ್ತು ವೆಸ್ಟ್ ಬ್ಯಾಂಕ್, ಪೂರ್ವ ಜೆರುಸಲೆಮ್ ನಲ್ಲಿ ಕನಿಷ್ಠ 110 ಜನರು ಬಲಿಯಾಗಿದ್ದಾರೆ.



Join Whatsapp