ತಮಿಳುನಾಡಿನಲ್ಲಿ ಆನ್ಲೈನ್ ಗೇಮ್ಸ್, ಜೂಜಾಟ ನಿಷೇಧಿಸಲು ಎಂ.ಕೆ ಸ್ಟಾಲಿನ್ ಸರ್ಕಾರ ತೀರ್ಮಾನ

Prasthutha|

ಚೆನ್ನೈ: ಸೆಪ್ಟಂಬರ್ 26 ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ರವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಕೆ.ಚಂದ್ರು ನೇತೃತ್ವದ ಸಮಿತಿಯು ನೀಡಿದ ಶಿಫಾರಸಿನ ಆಧಾರದಲ್ಲಿ ಆನ್ಲೈನ್ ಗೇಮ್ಸ್, ಜೂಜಾಟ ನಿಷೇಧಿಸಲು ನಿರ್ಣಯ ಕೈಗೊಳ್ಳಲಾಗಿದೆ.

- Advertisement -


ಅಕ್ಟೋಬರ್ 01 ರಂದು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಈ ಕುರಿತ ಮಹತ್ವದ ನಿರ್ಣಯಕ್ಕೆ ಸಹಿ ಹಾಕಿದ್ದಾರೆ. ಸರಕಾರ ಆನ್ಲೈನ್ ಗೇಮಿಂಗ್ ಪ್ರಾಧಿಕಾರವನ್ನು ರಚಿಸಲಿದೆ. ನಂತರ ಕೆಲವೇ ದಿನಗಳಲ್ಲಿ ಈ ಜೂಜಾಟಗಳನ್ನು ನಿಷೇಧಿಸುವುದಾಗಿ ಸರ್ಕಾರ ಹೇಳಿದೆ.


ಸರ್ಕಾರ ನಡೆಸಿದ ಸಮೀಕ್ಷೆ ಪ್ರಕಾರ, ಇಂತಹ ಆನ್ಲೈನ್ ಗೇಮ್ ಗಳಿಂದಾಗಿ ವಿದ್ಯಾರ್ಥಿಗಳೇ ಹೆಚ್ಚು ತೊಂದರೆಗೆ ಒಳಪಟ್ಟಿದ್ದಾರೆ. ಸುಮಾರು 2 ಲಕ್ಷದಷ್ಟು ಶಿಕ್ಷಕರನ್ನೊಳಗೊಂಡ ಸರ್ವೆಯಲ್ಲಿ ‘ವಿದ್ಯಾರ್ಥಿಗಳಲ್ಲಿ ಆನ್ ಲೈನ್ ಗೇಮ್ ಗಳಿಂದ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗಿದೆ, ಕಣ್ಣಿನ ಆರೋಗ್ಯ ಸಮಸ್ಯೆಗೂ ಒಳಗಾಗಿದ್ದಾರೆ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ’ ಎಂದು ಹೆಚ್ಚಿನವರ ಅಭಿಪ್ರಾಯವಾಗಿದೆ.

- Advertisement -


ಆನ್ ಲೈನ್ ಗೇಮ್ಸ್, ಜೂಜಾಟ ನಿಷೇಧ ಕಾಯ್ದೆಯು ಜಾರಿಗೊಳಿಸಿದ ನಂತರ ಆನ್ ಲೈನ್ ಗೇಮ್ ಅಥವಾ ಜೂಜು ಆಡಿದವರಿಗೆ 3 ತಿಂಗಳ ಜೈಲು ಅಥವಾ 5000 ರೂ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು. ಆನ್ ಲೈನ್ ಗೇಮ್, ಜೂಜು ಆಡಿಸುವವರೆಗೆ 5 ವರ್ಷ ಜೈಲು ಅಥವಾ 10 ಲಕ್ಷ ರೂ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು. ಈ ಗೇಮ್ ಗಳನ್ನು ಮಾಧ್ಯಮಗಳಲ್ಲಿ ಜಾಹೀರಾತು ನೀಡಿದವರಿಗೆ ಒಂದು ವರ್ಷ ಜೈಲು ಅಥವಾ 5 ಲಕ್ಷ ರೂ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.



Join Whatsapp