ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಾವಣೆಗೆ ಸಿದ್ದರಾಮಯ್ಯ, ವಾಟಾಳ್ ನಾಗರಾಜ್ ವಿರೋಧ

Prasthutha|

ಬೆಂಗಳೂರು: ಮೈಸೂರು – ಬೆಂಗಳೂರು ನಡುವೆ ನಿತ್ಯ ಸಂಚರಿಸುತ್ತಿರುವ  ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು  ಒಡೆಯರ್ ಎಕ್ಸ್ ಪ್ರೆಸ್ ಎಂದು ಬದಲಾಯಿಸಿ ಕೇಂದ್ರ ರೈಲ್ವೆ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದ್ದು, ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಮಾತನಾಡಿದ ವಾಟಾಳ್ ನಾಗರಾಜ್, ಟಿಪ್ಪು ಎಕ್ಸ್ ಪ್ರೆಸ್ ಅನ್ನು ಮರುನಾಮಕರಣ ಮಾಡಿರುವುದು ಖಂಡನೀಯ. ಟಿಪ್ಪು ಇಂಗ್ಲಿಷರ ವಿರುದ್ಧ ಹೋರಾಡಿ ತನ್ನ ಪ್ರಾಣವನ್ನೇ ಅರ್ಪಿಸಿದ್ದಾರೆ. ಅಲ್ಲದೆ ತನ್ನೆರಡು ಮಕ್ಕಳನ್ನೂ ಕೂಡ ದೇಶಕ್ಕಾಗಿ  ಒತ್ತೆ ಇಟ್ಟಿದ್ದರು. ಮರುನಾಮಕರಣಕ್ಕೆ ಆದೇಶ ನೀಡಿರುವ ಕೇಂದ್ರ ಸರಕಾರದ ನಡೆಯು ನಾಚಿಕೆಗೇಡಿತನ ಹಾಗೂ ಅನಾಗರಿಕ ವರ್ತನೆಯಾಗಿದೆ. ಇದರಿಂದ ನನಗೆ ಬಹಳ ನೋವಾಗಿದೆ.  ಇಂತಹ ಪರಿಸ್ಥಿತಿ ಮುಂದುವರಿದರೆ ಎಲ್ಲರೂ ತಮ್ಮ ಗೌರವ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ‘ಬಿಜೆಪಿಯವರಿಗೆ ದ್ವೇಷ ಬಿತ್ತುವುದೇ ಕೆಲಸ.  ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲಾಯಿಸುವ ಅಗತ್ಯವಿರಲಿಲ್ಲ. ಇದರ ಬದಲಾಗಿ ಹೊಸ ರೈಲಿಗೆ ಒಡೆಯರ್ ಹೆಸರು ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು  ಎಂದು ಹೇಳಿದರು.

- Advertisement -

ಒಡೆಯರ್ ಅವರಿಗೆ ಗೌರವ ಕೊಡಬೇಕೆಂದರೆ ಇನ್ನೊಂದು ಹೊಸ ರೈಲಿಗೆ ಹೆಸರಿಡಲಿ. ಇದು ದ್ವೇಷ ಬಿತ್ತುವ ಉದ್ದೇಶದಿಂದಲೇ ಬಿಜೆಪಿಯವರು ಈ ಥರ ಎಲ್ಲ ಮಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.



Join Whatsapp