ಆರ್ಥಿಕ ಅಭಿವೃದ್ಧಿಯ ಗುರಿ; RBI ಯಿಂದ ಡಿಜಿಟಲ್ ರೂಪಾಯಿ ಘೋಷಣೆ

Prasthutha|

ಹೊಸದಿಲ್ಲಿ: ದೇಶದಲ್ಲಿ ಮೊದಲ ಬಾರಿಗೆ ಇ-ರುಪಿ (ಡಿಜಿಟಲ್ ಕರೆನ್ಸಿ ) ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಣೆ ಮಾಡಿದೆ.

- Advertisement -

ಮಾರ್ಚ್ 31, 2023 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತವು ತನ್ನದೇ ಆದ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.


ಡಿಜಿಟಲ್ ರೂಪಾಯಿಯು ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಹಣಕಾಸು ಮತ್ತು ಪಾವತಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ ಎಂದು ಆರ್ ಬಿಐ ಹೇಳಿದೆ.

- Advertisement -


ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಟಿಪ್ಪಣಿಯ ಪ್ರಕಾರ,ಭಾರತೀಯ ರಿಸರ್ವ್ ಬ್ಯಾಂಕ್ ನ ಡಿಜಿಟಲ್ ರೂಪಾಯಿ ಅಥವಾ ಇ-ರೂಪಾಯಿ, RBI ಯ CBDC ಸಾರ್ವಭೌಮ ಕರೆನ್ಸಿಯಂತೆಯೇ ಇರುತ್ತದೆ ಮತ್ತು ಕರೆನ್ಸಿಗೆ ಸಮಾನವಾಗಿ ಒಂದರಿಂದ ಒಂದಕ್ಕೆ ವಿನಿಮಯ ಮಾಡಿಕೊಳ್ಳಬಹುದು. ಇದನ್ನು ಕಾಗದದ ಕರೆನ್ಸಿಯಾಗಿಯೂ ಪರಿವರ್ತಿಸಬಹುದು ಎಂದು ನಿಯಂತ್ರಕರು ಉಲ್ಲೇಖಿಸಿದ್ದಾರೆ.



Join Whatsapp