ಮುಂಬೈ: ಆರ್ ಎಸ್ ಎಸ್ ನಿಂದ ಅಪಾಯವಿದೆ ಎಂದು ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಲಾಗುತ್ತಿದೆ. ಇದು ಹಿಂದೆಯೂ ಆಗಿಲ್ಲ, ಮುಂದೆಯೂ ಆಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವರ್ಣ, ಜಾತಿ ಪರಿಕಲ್ಪನೆಗಳನ್ನು ಮರೆತುಬಿಡಬೇಕು. ಇಂದು ಯಾರಾದರೂ ಅದರ ಬಗ್ಗೆ ಕೇಳಿದರೆ, ಸಮಾಜದ ಹಿತಾಸಕ್ತಿಯಿಂದ ಯೋಚಿಸುವ ಪ್ರತಿಯೊಬ್ಬರೂ ಇದು ಹಳೇ ವಿಷಯ ಎಂದು ಹೇಳಬೇಕು ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾತರನ್ನು ಅಪಾಯಕ್ಕೆ ಸಿಲುಕಿಸುವುದು ಸಂಘ ಅಥವಾ ಹಿಂದೂಗಳ ಸ್ವಭಾವವಲ್ಲ. ಆರ್ ಎಸ್ ಎಸ್ ಸಹೋದರತ್ವದ ಪರವಾಗಿ ನಿಲ್ಲಲು ನಿರ್ಧರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.