ಪ್ರೊ ಕಬಡ್ಡಿ| ಕಂಠೀರವದಲ್ಲಿ ಗೆಲುವಿನ ಆರಂಭ ಪಡೆದ ಬೆಂಗಳೂರು ಬುಲ್ಸ್

Prasthutha|

ಬೆಂಗಳೂರು: ಪ್ರೊ ಕಬಡ್ಡಿ ಟೂರ್ನಿಯ 9ನೇ ಆವೃತ್ತಿಯಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ತಂಡ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿದೆ.  ಕಂಠೀರವ ಒಳಾಂಗಣ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಬೆಂಗಳೂರು, 34–29 ಅಂಕಗಳ ಅಂತರದಿಂದ ರಿಂದ ತೆಲುಗು ಟೈಟನ್ಸ್‌ ಸವಾಲನ್ನು ಮೀರಿ ನಿಲ್ಲುವಲ್ಲಿ ಯಶಸ್ವಿಯಾಯಿತು.

- Advertisement -

ಪಂದ್ಯದ ಮಧ್ಯಂತರ ವಿರಾಮದ ವೇಳೆಗೆ ಉಭಯ ತಂಡಗಳು 17-17 ಅಂಕಗಳ ಅಂತರದಲ್ಲಿ ಸಮಬಲದ ಹೋಋಆಟ ಪ್ರದರ್ಶಿಸಿತ್ತು. ಆದರೆ ನೀರಜ್ ನರ್ವಾಲ್ ಹಾಗೂ ವಿಕಾಶ್ ಖಂಡೋಲಾ ಅವರ ಚುರುಕಿನ ದಾಳಿಯ ಬಲದಿಂದ ಬುಲ್ಸ್ ತಂಡ ದ್ವಿತಿಯಾರ್ಧದಲ್ಲಿ ಮುನ್ನಡೆ ಕಾಯ್ದುಕೊಂಡು ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ರಕ್ಷಣಾ ವಿಭಾಗದಲ್ಲಿ ಮಹೇಂದರ್ ಮತ್ತತು ಸೌರಭ್ ನಂದಾಲ್ ತಲಾ ನಾಲ್ಕು ಅಂಕ ಗಳಿಸುವ ಮೂಲಕ ಮಿಂಚಿದರು. ನೀರಜ್ 7 ಅಂಕ ಗಳಿಸಿದರೆ, ಖಂಡೋಲಾ ಮತ್ತು ಭರತ್ ತಲಾ 5 ಅಂಕ ಗಳಿಸಿದರು. ಟೈಟನ್ಸ್‌ ಪರವಾಗಿ ರಜನೀಶ್ ಏಳು ಅಂಕ ಗಳಿಸಿದರು.

ಡೆಲ್ಲಿ ಶುಭಾರಂಭ

- Advertisement -

9ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡವು ಯು ಮುಂಬಾ ವಿರುದ್ಧ 41-27 ಅಂಕಗಳ ಅಂತರದಲ್ಲಿ ಜಯ ಗಳಿಸುವ ಮೂಲಕ ಶುಭಾರಂಭ ಮಾಡಿತು.  ಚುರುಕಿನ ದಾಳಿ ನಡೆಸಿದ ಡೆಲ್ಲಿ ತಂಡದ ನಾಯಕ ನವೀನ್‌, 13 ಅಂಕಗಳನ್ನು ಗಳಿಸಿದರು.  ಯು ಮುಂಬಾ ತಂಡವನ್ನು ಎರಡು ಬಾರಿ ಆಲೌಟ್‌ ಮಾಡುವಲ್ಲಿ ಹಾಲಿ ಚಾಂಪಿಯನ್ನರು ಯಶಸ್ವಿಯಾದರು.

ಮೊದಲ ದಿನದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ  ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ತಂಡದ ವಿರುದ್ಧ ಯುಪಿ ಯೋಧಾಸ್‌ 34-32 ಅಂತರದಲ್ಲಿ ರೋಚಕ ಜಯ ಗಳಿಸಿತು. ತೀವ್ರ ಜಿದ್ದಾನಿಂದ ಕೂಡಿದ್ದ ಈ ಪಂದ್ಯದಲ್ಲಿ ಪ್ರತಿ ಅಂಕಕ್ಕೂ ಉಭಯ ತಂಡಗಳ ಆಟಗಾರರು ಸಾಕಷ್ಟು ಶ್ರಮವಹಿಸಬೇಕಾಯಿತು. ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪ್ಯಾಂಥರ್ಸ್‌ ವಿರುದ್ಧ ಯೋಧಾಸ್‌ ಗಳಿಸಿದ ಐದನೇ ಗೆಲುವು ಇದಾಗಿದೆ.

ರಾಷ್ಟ್ರಗೀತೆ ಮೂಲಕ ಟೂರ್ನಿಗೆ ಚಾಲನೆ 

ಕನ್ನಡ ವಾಹಿನಿಗಳ ರಿಯಾಲಿಟಿ ಶೋನಲ್ಲಿ ಜನಮನ ಗೆದ್ದ ಪುಟ್ಟ ತಾರೆ ವಂಶಿಕಾ ಅಂಜನಿ ಕಶ್ಯಪ್‌ ಅವರು ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಟೂರ್ನಿಗೆ ಚಾಲನೆ ದೊರೆಯಿತು.



Join Whatsapp