ಮಡಿಕೇರಿ: ಇಲ್ಲಿನ ಹರಿಹರ ಗ್ರಾಮದಲ್ಲಿ ಕಳೆದ ರಾತ್ರಿ ಹುಲಿಯೊಂದು ದಾಳಿ ನಡೆಸಿ ತೀತೀರ ಸದಬೋಪಯ್ಯ ಎಂಬವರ ಎರಡು ಎಮ್ಮೆಗಳನ್ನು ಕೊಂದು ಹಾಕಿವೆ. ಕಳೆದ ವಾರವಷ್ಟೇ ಚಿಮ್ಮುಣೀರ ಜೀವನ ಎಂಬವರ ಹಸುವನ್ನು ಹುಲಿ ಕೊಂದಿದ್ದು ಗ್ರಾಮಸ್ಥರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ಘಟನಾ ಸ್ಥಳಕ್ಕೆ ವಿರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಕಟ್ಟೆರ ಈಶ್ವರ ತಿಮ್ಮಯ್ಶ ತೆರಳಿ ಹುಲಿ ಸೆರೆ ಹಿಡಿಯದ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲೇ ಪರಿಹಾರ ವಿತರಿಸಬೇಕು ಮತ್ತು ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.