ಮಸೀದಿ ಅಪವಿತ್ರಗೊಳಿಸಲು ಯತ್ನ: ಕೋಮು ಗಲಭೆಗೆ ಯತ್ನಿಸಿದ ಮೂವರು ಯುವಕರ ಬಂಧನ

Prasthutha|

ರಾಂಚಿ: ಕೋಮುಗಲಭೆ ಸೃಷ್ಟಿಸುವ ನೆಪದಲ್ಲಿ ಮೂವರು ದುಷ್ಕರ್ಮಿಗಳು, ಮಸೀದಿಗೆ ನುಗ್ಗಿ ಮೂತ್ರ ವಿಸರ್ಜನೆ ಮಾಡಿದ ಘಟನೆ ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯ ತೆಲಿದಿಹ್ ಗ್ರಾಮದಲ್ಲಿ ನಡೆದಿದೆ.

- Advertisement -

ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯ ಪಚಂಬಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೋಮು ಗಲಭೆ ಸೃಷ್ಟಿಸಲು ಈ ದುಷ್ಕೃತ್ಯ ನಡೆಸಲಾಗಿದೆ ಎಂದು ಶಂಕಿಸಲಾಗಿದೆ .

ವಿಷಯ ತಿಳಿದ ತಕ್ಷಣ ಸ್ಥಳೀಯ ಗ್ರಾಮಸ್ಥರು ಮಸೀದಿಗೆ ಜಮಾಯಿಸಿ ಗದ್ದಲವನ್ನು ಸೃಷ್ಟಿಸಿ, ಗಂಟೆಗಟ್ಟಲೆ ರಸ್ತೆಯನ್ನು ನಿರ್ಬಂಧಿಸಿದ್ದರು.  ಅಲ್ಲದೆ ಆರೋಪಿಗಳನ್ನು ಹಿಡಿದು ಒಂದು ಕೋಣೆಯಲ್ಲಿ ಕೂಡಿಹಾಕಿದ್ದರು ಎಂದು ತಿಳಿದುಬಂದಿದೆ.

- Advertisement -

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ಮತ್ತು ಜಿಲ್ಲಾಧಿಕಾರಿ ನಮನ್ ಪ್ರೀನ್ಸ್ ಲಾಕ್ರಾ ಅವರು ಭಾರೀ ಭದ್ರತಾ ಪಡೆಯೊಂದಿಗೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು. ಈ ಸಮಯದಲ್ಲಿ, ಕೋಪಗೊಂಡ ಗ್ರಾಮಸ್ಥರು ವಾಹನವನ್ನು ಹಾನಿಗೊಳಿಸಿದ್ದಾರೆ.

ಈ ಸಂಬಂಧ ಪಚಂಬಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿದು ಬಂದಿದೆ.



Join Whatsapp