ವಿಶ್ವವಿದ್ಯಾಲಯಗಳಲ್ಲಿ ರ್‍ಯಾಗಿಂಗ್ ತಡೆಗೆ ಯುಜಿಸಿ ಹೊಸ ಮಾರ್ಗಸೂಚಿ

Prasthutha|

ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)  ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳಲ್ಲಿ ಭಯದ ವಾತಾವರಣವನ್ನು ನಿರ್ಮೂಲನಗೊಳಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ವಿದ್ಯಾರ್ಥಿಗಳೊಂದಿಗೆ ನಿಯಮಿತ ಸಂವಹನ ಮತ್ತು ಸಮಾಲೋಚನೆ, ರ್‍ಯಾಗಿಂಗ್ ವಿರೋಧಿ ಸಮಿತಿ ರಚನೆ, ಹಾಗೂ ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ ಮುಂತಾದವುಗಳು ಸೇರಿವೆ.

- Advertisement -

ವಿಶ್ರಾಂತಿ ಕೊಠಡಿ, ಹಾಸ್ಟೆಲ್, ಶೌಚಾಲಯಗಳಿಗೆ, ಬಸ್ ನಿಲ್ದಾಣಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕವೂ ರ್‍ಯಾಗಿಂಗ್ ಅಥವಾ ವಿದ್ಯಾರ್ಥಿಗಳ ಅಹಿತಕರ ವರ್ತನೆಗಳನ್ನು ನಿಯಂತ್ರಿಸಬಹುದು. ವಿದ್ಯಾರ್ಥಿಗಳೊಂದಿಗೆ ನಿಯಮಿತ ಸಂವಹನ ಮತ್ತು ಸಮಾಲೋಚನೆ ನಡೆಸುವುದರಿಂದ ರ್‍ಯಾಗಿಂಗ್ ಅನ್ನು ಮೊದಲ ಹಂತದಲ್ಲೇ ಪತ್ತೆ ಮಾಡಿ ನಿಯಂತ್ರಿಸಬಹುದು ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ವಿಶ್ವವಿದ್ಯಾಲಯಗಳಿಗೆ ಪತ್ರ ಮೂಲಕ ಮಾಹಿತಿ ನೀಡಿದ್ದಾರೆ. ರ್‍ಯಾಗಿಂಗ್ ವಿರೋಧಿ ದಳ ರಚನೆ ಮಾಡಿದ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ನೀಡಿ ಅರಿವು ಮೂಡಿಸಬೇಕೆಂದು ಯುಜಿಸಿ ಸಲಹೆ ನೀಡಿದೆ.




Join Whatsapp