ತಿರುವನಂತಪುರಂ: ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿರುವ ಘಟನೆ ಕೇರಳದ ಕಂಜಿರಪಲ್ಲಿಯಲ್ಲಿ ನಡೆದಿದೆ.
ಶಿಹಾಬ್ ಅಮಾನತಾದ ಅಧಿಕಾರಿ. ಇವರು ಇಡುಕ್ಕಿಯಲ್ಲಿರುವ ಎಆರ್ ಕ್ಯಾಂಪ್ ನಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕದ್ದಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಿಹಾಬ್ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.