ರಾಷ್ಟ್ರೀಯ ಪಕ್ಷ ಘೋಷಣೆಯ ಸಂಭ್ರಮಾಚರಣೆ ಭಾಗವಾಗಿ ಮದ್ಯ, ಕೋಳಿಗಳನ್ನು ಹಂಚಿದ ಟಿ ಆರ್ ಎಸ್ ನಾಯಕ

Prasthutha|

ಹೈದರಾಬಾದ್: ವಿಜಯದಶಮಿ ದಿನದಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಟಿಆರ್ಎಸ್ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತಿಸುವ ಯೋಜನೆ ರೂಪಿಸಿದ್ದು, ಅದಕ್ಕೂ ಮುಂಚಿತವಾಗಿ ಪಕ್ಷದ ಮುಖಂಡರೊಬ್ಬರು ಜನರಿಗೆ ಮದ್ಯದ ಬಾಟಲಿ ಮತ್ತು ಕೋಳಿಗಳನ್ನು ಹಂಚಿ ಸಂಭ್ರಮಿಸುತ್ತಿರುವುದು ಸುದ್ದಿಯಾಗಿದೆ.

- Advertisement -

ಟಿ ಆರ್ ಎಸ್ ಪಕ್ಷದ ನಾಯಕ ರಾಜನಾಳ ಶ್ರೀಹರಿ ವಾರಂಗಲ್ನಲ್ಲಿ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಲಿಕ್ಕರ್ ಬಾಟಲಿಗಳು ಹಾಗೂ ಜೀವಂತ ಕೋಳಿಗಳನ್ನು ನೀಡುವ ಮೂಲಕ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ರಾಷ್ಟ್ರೀಯ ಪಕ್ಷ ಘೋಷಣೆಯ ಸಂಭ್ರಮಾಚರಣೆ ಭಾಗವಾಗಿ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ.‌

ಈ ನಡೆಯು ವ್ಯಾಪಕ ಟೀಕೆಗೆ ಅನುವು ಮಾಡಿದೆ. ಸುಮಾರು 200 ಬಾಟಲಿಯಷ್ಟು ಕ್ವಾರ್ಟರ್ ಆಲ್ಕೋಹಾಲ್ ಮತ್ತು 200 ಕೋಳಿಗಳನ್ನು ಹಂಚಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.



Join Whatsapp