ರಾಷ್ಟ್ರೀಯ ಕ್ರೀಡಾಕೂಟ| ಪದಕ ಗೆದ್ದ ಮುಹಮ್ಮದ್ ಅಫ್ಸಲ್‌, ಅಜ್ಮಲ್‌, ಜಾಬಿರ್‌

Prasthutha|

​​​​​​​ಗುಜರಾತ್‌ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಪುರುಷರ 800 ಮೀಟರ್‌ ಓಟದಲ್ಲಿ ಸರ್ವಿಸಸ್‌ನ ಮುಹಮ್ಮದ್ ಅಫ್ಸಲ್ 1:46.30 ನಿಮಿಷಗಳ ಅವಧಿಯಲ್ಲಿ ಮೊದಲಿಗರಾಗಿ ಗುರಿ ತಲುಪಿ ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದ್ದಾರೆ.

- Advertisement -

200 ಮೀಟರ್ ಓಟ: ಅಜ್ಮಲ್‌ಗೆ ಕಂಚು

ಪುರುಷರ 200 ಮೀಟರ್ ಓಟದಲ್ಲಿ ಅಸ್ಸಾಂನ ಅಮ್ಲಾನ್ ಬೊರ್ಗೊಹೈನ್, 20.55 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಕೂಟ ದಾಖಲೆಯೊಂದಿಗೆ  ಚಿನ್ನ ಗೆದ್ದರು.  ಕರ್ನಾಟಕದ ಅಭಿನ್ ದೇವಾಡಿಗ ಬೆಳ್ಳಿ ಮತ್ತು  ಕಂಚಿನ ಪದಕವನ್ನು ಸರ್ವಿಸಸ್‌ನ ಮುಹಮ್ಮದ್ ಅಜ್ಮಲ್ ಪಡೆದರು.

- Advertisement -

400 ಮೀಟರ್‌ ಹರ್ಡಲ್ಸ್: ಜಾಬಿರ್‌ಗೆ ಬೆಳ್ಳಿ

ಪುರುಷರ 400 ಮೀ ಹರ್ಡರ್ಲ್ಸ್‌ನಲ್ಲಿ  ಸರ್ವಿಸಸ್‌ನ ಸಂತೋಷ್ ಕುಮಾರ್ ಟಿ, 49.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ರಾಷ್ಟ್ರೀಯ ದಾಖಲೆಯೊಂದಿಗೆ  ಚಿನ್ನ ಗೆದ್ದರು. ಸರ್ವಿಸಸ್‌ನ ಎಂಪಿ ಜಾಬಿರ್ (50.57ಸೆಕಂಡ್) ಬೆಳ್ಳಿ ಗೆದ್ದರೆ, ತಮಿಳುನಾಡಿನ ಕೆ.ಸತೀಶ್ (50.70 ಸೆಕೆಂಡ್‌) ಕಂಚು ಪಡೆದರು.

https://twitter.com/search?q=Mohammed%20Afsal%20of%20Services&src=typed_query

ಟೆನಿಸ್‌| ಕರ್ನಾಟಕಕ್ಕೆ ಚಿನ್ನ, ಬೆಳ್ಳಿ

36ನೇ ರಾಷ್ಟ್ರೀಯ ಕ್ರೀಡಾಕೂಟದ ಟೆನಿಸ್‌ನಲ್ಲಿ ಆಮೋಘ ಆಟ ಪ್ರದರ್ಶಿಸಿದ ಕರ್ನಾಟಕದ ಪುರುಷ ತಂಡ ಚಿನ್ನದ ಪದಕ ಗೆದ್ದು ಸಂಭ್ರಮಿಸಿದೆ. ಆದರೆ ಫೈನಲ್‌ನಲ್ಲಿ ಮುಗ್ಗರಿಸಿದ ಮಹಿಳಾ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಅಹಮದಾಬಾದ್‌ನ ಸಾಬರಮತಿಯಲ್ಲಿ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್‌ ಪಂದ್ಯದಲ್ಲಿ  ಎಸ್ ಡಿ ಪ್ರಜ್ವಲ್ ದೇವ್ ಮತ್ತು ಆದಿಲ್ ಕಲ್ಯಾಣಪುರ್ ಜೋಡಿ ಗುಜರಾತ್‌ನ ಧ್ರುವ್ ಹಿರಪಾ ಮತ್ತು ಮಧ್ವಿನ್ ಕಾಮತ್ ವಿರುದ್ಧ 6-3, 6-4  ಅಂತರದಲ್ಲಿ ನೇರ ಸೆಟ್‌ಗಳಿಂದ ಗೆದ್ದು ಸ್ವರ್ಣ ಪದಕವನ್ನು ಕೊರಳಿಗೇರಿಸಿಕೊಂಡರು. ಮಹಿಳೆಯರ ಡಬಲ್ಸ್ ಫೈನಲ್‌ ಪ್ರವೇಶಿಸಿದ್ದ ಕರ್ನಾಟಕದ ಶರ್ಮದಾ ಬಲು ಮತ್ತು ಸೋಹಾ ಸಾದಿಕ್, ಮಹಾರಾಷ್ಟ್ರದ ರುತುಜಾ ಭೋಸ್ಲೆ ಮತ್ತು ವೈಷ್ಣವಿ ಅಡ್ಕರ್ ಜೋಡಿಗೆ 6-4, 6-4 ಅಂತರದಲ್ಲಿ ಶರಣಾಯಿತು.

ಮಹಿಳೆಯರ 200 ಮೀ ಓಟದ ಫೈನಲ್‌ನಲ್ಲಿ ತಮಿಳುನಾಡಿನ ಅರ್ಚನಾ ಸುಸೀಂದ್ರನ್ 23.06 ಸೆಕೆಂಡ್‌ ಸಮಯದಲ್ಲಿ ಮೊದಲಿಗಳಾಗಿ ಗುರಿ ಮುಟ್ಟಿದರು. ಅಸ್ಸಾಂನ ಹಿಮಾ ದಾಸ್ ಬೆಳ್ಳಿ ಪಡೆದರು.

ಮಿಶ್ರ ರಿಲೇನಲ್ಲಿ ಕರ್ನಾಟಕಕ್ಕೆ ಬೆಳ್ಳಿ

4×400 ಮೀಟರ್ ಮಿಶ್ರ ರಿಲೇ ವಿಭಾಗದಲ್ಲಿ ಹರಿಯಾಣ ತಂಡವು ಚಿನ್ನ ಗೆದ್ದರೆ (3:14.30 ಸೆಕೆಂಡ್ ಸಮಯ, ಕರ್ನಾಟಕಕ್ಕೆ ಬೆಳ್ಳಿ ಮತ್ತು ದೆಹಲಿಗೆ ಕಂಚಿನ ಪದಕ ಒಲಿಯಿತು.

400 ಮೀಟರ್ ಹರ್ಡಲ್ಸ್: ಕರ್ನಾಟಕಕ್ಕೆ ಕಂಚು

ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಕರ್ನಾಟಕದ ಸಿಂಚಲ್ (58.74 ಸೆಕೆಂಡ್‌ ಸಮಯದೊಂದೊಗೆ ಕಂಚಿನ ಪದಕ ಪಡೆದರು. ತಮಿಳುನಾಡಿನ ವಿತ್ಯಾ ರಾಮರಾಜ್, ನೂತನ ರಾಷ್ಟ್ರೀಯ ದಾಖಲೆಯ ಸಮಯದೊಂದಿಗೆ (56.58 ಸೆಕೆಂಡ್‌) ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.  ಕೇರಳದ ಆರತಿ ಆರ್ (58.57ಸೆ) ಬೆಳ್ಳಿ ಪದಕ ಗೆದ್ದರು.

ಮಹಿಳೆಯರ 800 ಮೀ ಓಟದಲ್ಲಿ ಟಿಂಟು ಲೂಕಾ ಅವರ ರಾಷ್ಟ್ರೀಯ ದಾಖಲೆ ಮುರಿದ ದೆಹಲಿಯ ಚಂದಾ ಕೆಎಂ (2:01.58 ಸೆಕೆಂಡ್‌) ಚಿನ್ನ ಗೆದ್ದರು ಮತ್ತು



Join Whatsapp