ಬಿಹಾರದ ಕೃಷಿ ಸಚಿವ ರಾಜೀನಾಮೆ: ಪಕ್ಷಾಂತರಿಗಳ ಬಗ್ಗೆ ತೇಜಸ್ವಿ ಎಚ್ಚರಿಕೆ

Prasthutha|

ಪಾಟ್ನ: ಬಿಹಾರದ ಕೃಷಿ ಸಚಿವ ಸುಧಾಕರ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಇತ್ತೀಚೆಗೆ ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರದಿಂದ ಕೆಲಸ ಮಾಡುವುದು ಕಷ್ಟವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಎಚ್ಚರಿಸಿದ್ದರು. ಅದರಂತೆ ಸುಧಾಕರ ರಾವ್ ಮಂತ್ರಿಗಿರಿಗೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಪಕ್ಷಾಂತರ ಬಯಸುವವರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.

ಸುಧಾಕರ ಸಿಂಗ್ ರಾಷ್ಟ್ರೀಯ ಜನತಾ ದಳದ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್ ಅವರ ಮಗ. ತೇಜಸ್ವಿಯವರು ಸಚಿವ ಸಂಪುಟದಿಂದ ವಜಾಗೊಳಿಸುವ ಪರಿಸ್ಥಿತಿ ಬಾರದಂತೆ ತಿಳಿ ಹೇಳಿ ಎಂದು ಆರ್ ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ರಿಗೆ ತಿಳಿಸಿದ್ದಾರೆ. ಲಾಲೂ ಪ್ರಸಾದ್ ಮಗನ ಜೊತೆ ಮಾತನಾಡುವಂತೆ ಜಗದಾನಂದರಿಗೆ ತಿಳಿಸಿದ್ದಾರೆ. ಅಂತಿಮವಾಗಿ ಸುಧಾಕರ್ ಸಿಂಗ್ ಅವರೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಕೃಷಿ ಮಂತ್ರಿ ಖಾತೆಯನ್ನು ಪ್ರವಾಸೋದ್ಯಮ ಮಂತ್ರಿ ಕುಮಾರ್ ಸರ್ವಜಿತ್ ಅವರಿಗೆ ಒಪ್ಪಿಸಲಾಗಿದೆ. ತೇಜಸ್ವಿ ಯಾದವ್ ಅವರು ಹೆಚ್ಚುವರಿಯಾಗಿ ಪ್ರವಾಸೋದ್ಯಮ ಖಾತೆಯನ್ನು ವಹಿಸಿಕೊಂಡಿದ್ದಾರೆ.
ಈ ಸಂಬಂಧ ಜಗದಾನಂದ, ರೈತರಿಗೆ ಮೋಸ ಆಗಬಾರದು ಎಂದು ಮಗ ರಾಜೀನಾಮೆ ನೀಡಿದ್ದಾನೆ. ಕೇಂದ್ರದ ಕೃಷಿ ನೀತಿಗಳ ಬಗ್ಗೆ ರಾಜ್ಯದಲ್ಲಿ ಅಸಮಾಧಾನ ಇದೆ ಎಂದು ಹೇಳಿಕೆ ನೀಡಿದ್ದಾರೆ.

“ನನ್ನ ಇಲಾಖೆಯು ಕಳ್ಳರಿಂದ ತುಂಬಿದೆ. ನಾನು ಮಂತ್ರಿಯಾಗಿರುವುದರಿಂದ ಕೃಷಿಕರು ನನ್ನನ್ನು ಕಳ್ಳರ ಮುಖಂಡ ಎಂದು ತಿಳಿಯುವಂತಾಗಿದೆ” ಎಂದು ಕಳೆದ ತಿಂಗಳು ಸುಧಾಕರ ಸಿಂಗ್ ಹೇಳಿದ್ದರು. ಸರಕಾರ ಬದಲಾಗಿದೆ; ಕಳ್ಳರು, ಒಳ ಯಜಮಾನರುಗಳು ಬದಲಾಗಿಲ್ಲ ಎಂದೂ ಅವರು ಹೇಳಿದ್ದರು.



Join Whatsapp