ಭಾರತ್ ಜೋಡೋ ಯಾತ್ರೆ: ನಾಳೆ ಸೋನಿಯಾ ಗಾಂಧಿ ಮೈಸೂರಿಗೆ ಆಗಮನ

Prasthutha|

- Advertisement -

ಮೈಸೂರು: ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಗೆ ಕರ್ನಾಟಕದಲ್ಲಿ ಭಾರಿ ಸ್ಪಂದನೆ ಸಿಗುತ್ತಿದ್ದು, ಮಗನಿಗೆ ಸಾಥ್ ನೀಡಲು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಆದಿತ್ಯ ವಾರ ಸಂಜೆ ರಾಜ್ಯಕ್ಕೆ ಸೋನಿಯಾ ಗಾಂಧಿ ಆಗಮಿಸಲಿದ್ದು, ನಾಳೆ ಮೈಸೂರಿನಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದ ಮೂಲಗಳು ತಿಳಿಸಿವೆ.

- Advertisement -

ಹಳೇ ಮೈಸೂರು ಭಾಗಕ್ಕೆ ಕಾಂಗ್ರೆಸ್ ಹೆಚ್ಚು ಒತ್ತು ಕೊಡುತ್ತಿದ್ದು, ಅ.6ರಂದು ಪ್ರಿಯಾಂಕಾ ಗಾಂಧಿ ಕೂಡ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಪ್ರಿಯಾಂಕ ಗಾಂಧಿ ಪಾದಯಾತ್ರೆ ನಡೆಸಲಿದ್ದಾರೆ.



Join Whatsapp