ಡಿ.ಕೆ.ಶಿವಕುಮಾರ್​​ಗೆ ಮತ್ತೆ ಇಡಿ ನೋಟಿಸ್: ಅ. 7ರಂದು ಹಾಜರಾಗುವಂತೆ ಸೂಚನೆ

Prasthutha|

- Advertisement -

ಬೆಂಗಳೂರು: ನ್ಯಾಷನಲ್ ಹೆರಾಲ್ಡ್  ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಮತ್ತೆ ನೋಟಿಸ್ ನೀಡಿದೆ.

ಈ ಬಗ್ಗೆ ಮಾತನಾಡಿದ ಡಿಕೆಶಿ, ಎಐಸಿಸಿ ಅಧ್ಯಕ್ಷ ಚುನಾವಣೆ ಹಿನ್ನೆಲೆ ಕಾಲಾವಕಾಶ ಕೇಳಿದ್ದೇನೆ. ಆದರೆ ಇಡಿ ಅಧಿಕಾರಿಗಳು ಆಗಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ.

- Advertisement -

ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಕೇಸ್​​ ನಲ್ಲಿ ಹೊಸ ಸಮನ್ಸ್ ಕೊಟ್ಟಿದ್ದಾರೆ. 7 ನೇ ತಾರಿಕು ನನಗೆ ಹಾಗೂ ಡಿಕೆ ಸುರೇಶ್ ಗೆ ನೋಟಿಸ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಅಂದು ಆದಿಚುಂಚನಗಿರಿಗೆ ಹೋಗುತ್ತಿದ್ದಾರೆ. 7 ರಂದು ಬಿಟ್ಟು ಬೇರೆ ದಿನ ಕೊಡಿ ಅಂತ ಇನ್ನೊಮ್ಮೆ ಮನವಿ ಮಾಡಿಕೊಂಡಿರುವುದಾಗಿ ಡಿಕೆಶಿ ಹೇಳಿದ್ದಾರೆ.

ಆದಿಚುಂಚನಗಿರಿಗೆ ಪ್ರಿಯಾಂಕ  ಗಾಂಧಿ ಕೂಡ ಭೇಟಿ ನೀಡುವ ಸಾಧ್ಯತೆ ಇದೆ. ನಾನು ಇಲ್ಲದೇ ಹೋದ್ರೆ ತಪ್ಪಾಗುತ್ತದೆ. ಎಲ್ಲಾ ಜವಾಬ್ದಾರಿ ನನ್ನ ತಮ್ಮನೇ ಮಾಡುತ್ತಿದ್ದಾನೆ ಎಂದರು.



Join Whatsapp