RSS ಕಚೇರಿ ಬಳಿಯಿಂದ ಸ್ಟೀಲ್ ಬಾಂಬ್, ಮಾರಕಾಸ್ತ್ರ ವಶಪಡಿಸಿಕೊಂಡ ಪೊಲೀಸರು

Prasthutha|

ಕೊಯಿಲಾಂಡಿ: ಕೊಯಿಲಾಂಡಿಯ ಆರ್ ಎಸ್ ಎಸ್ ಕಚೇರಿಯ ಬಳಿಯಿಂದ ಸ್ಟೀಲ್ ಬಾಂಬ್ ಗಳು ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ಕೊಲ್ಲಂನ ಪಿಶರಿಕಾವ್ ದೇವಾಲಯದ ಮೈದಾನದ ಬಳಿಯ ಗಲ್ಲಿಯೊಂದರಲ್ಲಿ ಮೂರು ಸ್ಟೀಲ್ ಬಾಂಬ್ ಗಳು ಮತ್ತು ಒಂದು ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -


ಶಸ್ತ್ರಾಸ್ತ್ರಗಳನ್ನು ಮೊದಲು ಹತ್ತಿರದ ನಿವಾಸಿಗಳು ಗಮನಿಸಿದರು. ಬಳಿಕ ಅವರು ಈ ಬಗ್ಗೆ ಕೊಯಿಲಾಂಡಿ ಪೊಲೀಸರಿಗೆ ಮಾಹಿತಿ ನೀಡಿದಾಗ, ಪೊಲೀಸರು ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ನೊಂದಿಗೆ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.


ಮೂರು ವರ್ಷಗಳ ಹಿಂದೆಯೂ ಈ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಇವುಗಳನ್ನು ಆರ್ ಎಸ್ ಎಸ್ ಕಾರ್ಯಕರ್ತರು ಬಚ್ಚಿಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

- Advertisement -


ಬಾಂಬ್ ಮತ್ತು ಮಚ್ಚನ್ನು ವಶಪಡಿಸಿಕೊಂಡ ಸ್ಥಳವು ಆರ್ ಎಸ್ಎಸ್ ಪ್ರಭಾವವಿರುವ ಪ್ರದೇಶವಾಗಿದೆ. ದುಷ್ಕರ್ಮಿಗಳ ಉದ್ದೇಶ ಏನಾಗಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಶಸ್ತ್ರಾಸ್ತ್ರಗಳಿವೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.




Join Whatsapp