PFI ನಿಷೇಧ: ಆರೆಸ್ಸೆಸ್ ನಾಯಕರಿಗೆ ‘Y’ ಕೆಟಗರಿ ಭದ್ರತೆ

Prasthutha|

ಹೊಸದಿಲ್ಲಿ: ಪಿಎಫ್ ಐ ನಿಷೇಧದ ಬೆನ್ನಲ್ಲೇ ಕೇರಳದ ಐದು ಮಂದಿ ಆರೆಸ್ಸೆಸ್ ನಾಯಕರಿಗೆ ಕೇಂದ್ರ ಸರಕಾರವು ವೈ ಕೆಟಗರಿ ಭದ್ರತೆಯನ್ನು ಒದಗಿಸಿದೆ.

- Advertisement -

ಕೇರಳದಲ್ಲಿ ಆರೆಸ್ಸೆಸ್ ನಾಯಕರಿಗೆ ಬೆದರಿಕೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಧಾರದ ಮೇರೆಗೆ ಗೃಹ ವ್ಯವಹಾರಗಳ ಸಚಿವಾಲಯ ಶನಿವಾರ ಐವರು ಆರೆಸ್ಸೆಸ್ ನಾಯಕರಿಗೆ ಭದ್ರತೆಯನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ.

ಎನ್ ಐಎ, ಇಂಟೆಲಿಜೆನ್ಸ್ ಬ್ಯೂರೋದ ವರದಿಯ ಆಧಾರದ ಮೇಲೆ ಕೇರಳದ ಐವರು ಆರೆಸ್ಸೆಸ್ ನಾಯಕರಿಗೆ ವೈ ಕೆಟಗರಿ ಭದ್ರತೆಯನ್ನು ನೀಡಲಾಗುವುದು. ಆರೆಸ್ಸೆಸ್ ನಾಯಕರ ಭದ್ರತೆಗೆ ಅರೆಸೇನಾ ಪಡೆಗಳ ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

- Advertisement -

ಕೇರಳದಲ್ಲಿ ಮಧ್ಯ ರಾತ್ರಿಯಲ್ಲಿ ದಾಳಿ ಮಾಡಿ ಪಿಎಫ್ ಐ ನಾಯಕರನ್ನು ಬಂಧಿಸಿರುವುದರಿಂದ ಐವರು ಆರೆಸ್ಸೆಸ್ ನಾಯಕರು ಅಪಾಯ ಎದುರಿಸುತ್ತಿರುವುದಾಗಿ ಕೇಂದ್ರೀಯ ತನಿಖಾ ತಂಡಗಳು ಗೃಹ ಸಚಿವಾಲಯಕ್ಕೆ ವರದಿ ನೀಡಿವೆ. ಆದರೆ ಆ ಐವರು ಯಾರು ಎಂದು ಸಾರ್ವಜನಿಕವಾಗಿ ತಿಳಿಸಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.




Join Whatsapp