30ಕ್ಕೂ ಹೆಚ್ಚು ಕೃತ್ಯಗಳಲ್ಲಿ ಬೇಕಾಗಿದ್ದ ಕುಖ್ಯಾತ ಸುಲಿಗೆಕೋರ 3 ವರ್ಷಗಳ ಬಳಿಕ ಬಂಧನ

Prasthutha|

ಬೆಂಗಳೂರು: ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಸುಲಿಗೆಕೋರನನ್ನು ಅಶೋಕನಗರ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಸುಲಿಗೆಕೋರ  ಆಸೀಫ್ ಖಾನ್ ಅಲಿಯಾಸ್ ಪಿಸ್ತೂಲ್ (38) ಬಂಧಿತ ಆರೋಪಿಯಾಗಿದ್ದಾನೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಸುಮಾರು 3 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ. ಆರೋಪಿಯ ವಿರುದ್ದ  ಕಮರ್ಷಿಯಲ್ ಸ್ಟ್ರೀಟ್, ಬಸವನಗುಡಿ, ಸದಾಶಿವನಗರ, ಕಬ್ಬನ್ಪಾರ್ಕ್, ಶೇಷಾದ್ರಿಪುರಂ, ವಿಧಾನಸೌಧ ಹಾಗೂ ಇತರೆ ಪೊಲೀಸ್ ಠಾಣೆಗಳಲ್ಲಿ ಸುಮಾರು 30ಕ್ಕೂ ಹೆಚ್ಚು ರಾಬರಿ ಪ್ರಕರಣಗಳು ದಾಖಲಾಗಿದ್ದು, ಈ ಎಲ್ಲಾ ಪ್ರಕರಣಗಳ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಆರೋಪಿಯ ವಿರುದ್ದ  ನ್ಯಾಯಾಲಯವು ಎನ್.ಬಿ.ಡ್ಲ್ಬೂ ವಾರೆಂಟ್/ಪ್ರೊಕ್ಲಮೇಷನ್ಗಳನ್ನು ಹೊರಡಿಸಿದ್ದು, ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಅಶೋಕನಗರ ಪೊಲೀಸ್  ಇನ್ಸ್ ಪೆಕ್ಟರ್  ಶ್ರೀಕಾಂತ್ ಎಫ್.ತೋಟಗಿ ಮತ್ತವರ ತಂಡ  ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.




Join Whatsapp