ಹಣ ಬಲ ಬಳಸಿಕೊಂಡು ಎಲ್ಲಾ ರಾಜಕೀಯ ಪಕ್ಷಗಳನ್ನು ದುರ್ಬಲಗೊಳಿಸುತ್ತಿರುವ ಬಿಜೆಪಿ: ರಾಕೇಶ್ ಟಿಕಾಯತ್ ಟೀಕೆ

Prasthutha|

ಲಕ್ನೋ: ಬಿಜೆಪಿ ಹಣ ಬಳಸಿಕೊಂಡು ಎಲ್ಲಾ ರಾಜಕೀಯ ಪಕ್ಷಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.

- Advertisement -


ಶ್ರಾವಸ್ತಿಗೆ ತೆರಳುತ್ತಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಕಾಯತ್, ಅವರು (ಬಿಜೆಪಿ) ಇಡೀ ಪ್ರತಿಪಕ್ಷವನ್ನು ಕಿತ್ತೊಗೆಯಲು ಬಯಸುತ್ತಾರೆ, ಇದರಿಂದ ಒಂದು ಪಕ್ಷವು ಮಾತ್ರ ದೇಶವನ್ನು ಆಳುತ್ತದೆ. ಅವರು ಹಣಬಲವನ್ನು ಬಳಸಿಕೊಂಡು ಎಲ್ಲಾ ರಾಜಕೀಯ ಪಕ್ಷಗಳನ್ನು ದುರ್ಬಲಗೊಳಿಸುತ್ತಾರೆ ಎಂದು ಆರೋಪಿಸಿದರು.
ಈ ವರ್ಷದ ಆರಂಭದಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ 100 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ತಿರುಚಿದ್ದಾರೆ. ಕೇಸರಿ ಪಕ್ಷದ ಆಣತಿಯಂತೆ ಯಂತ್ರವು ಕೆಲಸ ಮಾಡಿದೆ ಎಂದು ಹೇಳಿದರು.


ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ ಬಗ್ಗೆ ಕೇಳಿದಾಗ, ಟಿಕಾಯತ್, ದೇಶವನ್ನು ಒಗ್ಗೂಡಿಸಲು ಇದು ಸರಿಯಾದ ಕ್ರಮವಾಗಿದೆ ಆದರೆ ಅದನ್ನು ಮೊದಲೇ ಮಾಡಬೇಕಿತ್ತು ಎಂದು ಹೇಳಿದರು.




Join Whatsapp