ರಷ್ಯಾ ಖಂಡನೆ ನಿರ್ಣಯದ ವಿರುದ್ಧದ ಮತದಾನಕ್ಕೆ ಗೈರಾದ ಭಾರತ

Prasthutha|

ವಾಷಿಂಗ್ಟನ್: ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾದ ಯುದ್ಧೋನ್ಮಾದವನ್ನು ಖಂಡಿಸಿ ಕೈಗೊಂಡ ನಿರ್ಣಯದ ಮತದಾನದ ವೇಳೆ ಭಾರತವು ಗೈರು ಹಾಜರಾಗಿ ಮತದಾನದಿಂದ ದೂರ ಉಳಿದಿದೆ.

- Advertisement -


ಭದ್ರತಾ ಮಂಡಳಿಗೆ ಭಾರತವನ್ನು ಕಾಯಂ ಸದಸ್ಯರಾಗಿಸುವ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿದ ಭಾರತವು ರಷ್ಯಾ, ಉಕ್ರೇನ್ ನಡುವಣ ಯುದ್ಧ ನಿಲ್ಲದ್ದರ ಬಗ್ಗೆ ಕಳವಳ ವ್ಯಕ್ತ ಪಡಿಸಿತು. ಶಾಂತಿ ಸ್ಥಾಪನೆ ಅಗತ್ಯ ಎಂದಿತು. ಆದರೆ ರಷ್ಯಾವನ್ನು ಖಂಡಿಸುವ ನಿರ್ಣಯದ ಪರ ಮತ ಚಲಾಯಿಸದೆ ದೂರ ಉಳಿಯಿತು.


ಒಂದನೇಯದಾಗಿ, ಭಾರತಕ್ಕೆ ರಷ್ಯಾದಿಂದ ಈಗ ರಿಯಾಯತಿ ದರದಲ್ಲಿ ಕಚ್ಚಾ ತೈಲ ದೊರಕುತ್ತಿರುವುದರಿಂದ ಕೋಟಿಗಟ್ಟಲೆ ಲಾಭ ಆಗುತ್ತಿದೆ. ಎರಡನೆಯದು ಭಾರತವನ್ನು ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರ ಆಗಿಸುವುದಕ್ಕೆ ರಷ್ಯಾ ಬೆಂಬಲ ನೀಡುತ್ತಿದೆ. ಈ ಕಾರಣಕ್ಕೆ ಭಾರತ, ರಷ್ಯಾ ವಿರುದ್ಧದ ಖಂಡನೆಯಿಂದ ಹೊರಗೇ ಉಳಿದಿದೆ.
ಭದ್ರತಾ ಮಂಡಳಿಯ 15ರಲ್ಲಿ 10 ಸದಸ್ಯ ದೇಶಗಳು ರಷ್ಯಾದ ಖಂಡನೆಯನ್ನು ಬೆಂಬಲಿಸಿ ಮತ ಚಲಾಯಿಸಿದವು. ಭಾರತ, ಚೀನಾ, ಬ್ರೆಜಿಲ್ ಮತದಾನದಿಂದ ಹೊರಗುಳಿದವು.




Join Whatsapp