ಭಾರತ್ ಜೊಡೋ ಯಾತ್ರೆಯಲ್ಲಿ ‘PayCM’ ಟೀಶರ್ಟ್ ಧರಿಸಿದ್ದ ಯುವಕನನ್ನು ಬಂಧಿಸಿದ ಪೊಲೀಸರು

Prasthutha|

ಚಾಮರಾಜನಗರ: ಪೇ ಸಿಎಂ ಅಭಿಯಾನವನ್ನು ಕಾಂಗ್ರೆಸ್ ಕಾರ್ಯಕರ್ತರು ಮುಂದುವರಿಸಿದ್ದಾರೆ.
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಯಾತ್ರೆಯಲ್ಲಿ ಯುವಕನೋರ್ವ ‘ಪೇಸಿಎಂ’ ಟೀ ಶರ್ಟ್ ಧರಿಸಿದಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವಿಜಯಪುರ ಮೂಲದ ಅಕ್ಷಯ್ ಕುಮಾರ್ ಬಂಧಿತ ಯುವಕ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದ್ದಾನೆಂಬ ಆರೋಪದ ಮೇಲೆ ಈತನ ವಿರುದ್ಧ ಚಾಮರಾಜನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ.




Join Whatsapp