ಕೇರಳದ ವೈದ್ಯನ ಕೈಬರಹದ ಪ್ರಿಸ್ ಕ್ರಿಪ್ಷನ್ ಫೋಟೋ ವೈರಲ್

Prasthutha|

ತಿರುವನಂತಪುರಂ: ವೈದ್ಯರ ಕೈಬರಹ ಯಾರಿಗೂ ಅರ್ಥವಾಗುವುದಿಲ್ಲ ಎಂಬ ಆರೋಪ ಹಿಂದಿನಿಂದಲೇ ಕೇಳಿಬರುತ್ತಿದೆ. ಅವರ ಕೈಬರಹವನ್ನು ಫಾರ್ಮಾಸಿಸ್ಟ್ ಗಳು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇತ್ತೀಚಿಗೆ  ವೈದ್ಯರೊಬ್ಬರು ಅಚ್ಚುಕಟ್ಟಾಗಿ ಬರೆದ ಪ್ರಿಸ್ ಕ್ರಿಪ್ಷನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಕೇರಳದ ಪಾಲಕ್ಕಾಡ್ ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್ ಸಿ) ಮಕ್ಕಳ ತಜ್ಞ  ಡಾ.ನಿತಿನ್ ನಾರಾಯಣನ್ ಅವರು ಬರೆದ ಪ್ರಿಸ್ ಕ್ರಿಪ್ಷನ್ ಅನ್ನು ಬೆನ್ಸಿ ಎಸ್ ಡಿ ಎಂಬುವವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡ ನಂತರ ಈ ಫೋಟೋ ಪ್ರಶಂಸೆಗೆ ಕಾರಣವಾಗಿದೆ.

ನಾನು ನನ್ನ ಪ್ರಿಸ್ಕ್ರಿಪ್ಷನ್ ಗಳನ್ನು ಬ್ಲಾಕ್ ಲೆಟರ್ ಗಳಲ್ಲಿ ಬರೆಯುತ್ತೇನೆ. ಇತರ ವೈದ್ಯರು ಅಸ್ಪಷ್ಟವಾಗಿ ಬರೆಯುತ್ತಾರೆ. ಏಕೆಂದರೆ ಅವರು ತುಂಬಾ ಕಾರ್ಯ ಒತ್ತಡದಲ್ಲಿರಬಹುದು. ನಾನು ಒತ್ತಡದಲ್ಲಿದ್ದರ ಸಹ ಪ್ರಿಸ್ಕ್ರಿಪ್ಷನ್ ಗಳನ್ನು ಸ್ಪಷ್ಟವಾಗಿ ಬರೆಯಲು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಕಾಪಿಬುಕ್ ಅಭ್ಯಾಸಗಳು ನನಗೆ ಸಹಾಯ ಮಾಡಿದವು ಮತ್ತು ನನ್ನ ಅಧ್ಯಯನ ಪೂರ್ಣಗೊಂಡ ನಂತರವೂ, ನಾನು ಬರವಣಿಗೆಯ ಶೈಲಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದೆ ಎಂದು ಡಾ. ನಾರಾಯಣನ್ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.



Join Whatsapp