ಹರತಾಳದ ವೇಳೆ ಹಾನಿ: 5 ಕೋಟಿ ರೂ. ಠೇವಣಿ ಇಡುವಂತೆ PFIಗೆ ಕೇರಳ ಹೈಕೋರ್ಟ್ ನಿರ್ದೇಶನ

Prasthutha|

ತಿರುವನಂತಪುರಂ: ಸೆಪ್ಟೆಂಬರ್ 23ರಂದು ಕೇರಳದಲ್ಲಿ PFI ಕರೆ ನೀಡಿದ್ದ ಹರತಾಳದ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿ PFI ಸಂಘಟನೆ 5.20 ಕೋಟಿ ರೂ. ಠೇವಣಿ ಇಡಬೇಕು ಎಂದು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ಮಾಡಿದೆ.

- Advertisement -

ಎರಡು ವಾರದೊಳಗೆ ಕೇರಳ ಸರ್ಕಾರಕ್ಕೆ ಈ ಹಣವನ್ನು ಪಾವತಿಸುವಂತೆ ಸೂಚಿಸಿದೆ. ಇದೇ ವೇಳೆ ಜನರ ಜೀವವನ್ನು ಗಂಡಾಂತರಕ್ಕೆ ದೂಡಿಬಾರದು ಎಂದು ಹೈಕೋರ್ಟ್ ಹೇಳಿದೆ.
ಸೆಪ್ಟೆಂಬರ್ 22ರಂದು ದೇಶಾದ್ಯಂತ PFI ಸಂಘಟನೆಯ ಕಚೇರಿಗಳ ಮೇಲೆ ರೇಡ್ ಮಾಡಿದ್ದ NIA, ಹಲವಾರು PFI ನಾಯಕರನ್ನು ಬಂಧಿಸಿತ್ತು. ಈ ರೇಡ್ ಮತ್ತು ಬಂಧನವನ್ನು ವಿರೋಧಿಸಿ PFI ಕೇರಳ ಘಟಕ ಸೆಪ್ಟೆಂಬರ್ 23ರಂದು ಹರತಾಳಕ್ಕೆ ಕರೆ ನೀಡಿತ್ತು.

ಸೆಪ್ಟೆಂಬರ್ 23ರ ಹರತಾಳದ ದಿನ ಕೇರಳದ ಹಲವೆಡೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗಿತ್ತು. ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟವಾಗಿತ್ತು. ಈ ಸಂಬಂಧ ಕೇರಳ ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಮುಹಮ್ಮದ್ ನಿಯಾಸ್ ಸಿ.ಪಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು.

- Advertisement -

ಈಗಾಗಲೇ PFI ಸಂಘಟನೆಯನ್ನು ಭಾರತ ಸರ್ಕಾರ ನಿಷೇಧಿಸಿದ್ದು, ಕೇರಳ PFI ಘಟಕ ವಿಸರ್ಜನೆಯಾಗಿದೆ.



Join Whatsapp