ಮಡಿಕೇರಿ: ಸಿದ್ದಾಪುರದ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯಿಂದ ಸಾರ್ವಜನಿಕ ಸೇವೆಗೆ ಐಸಿಯು ಆಂಬ್ಯುಲನ್ಸನ್ನು ಲೋಕಾರ್ಪಣೆ ಮಾಡಲಾಯಿತು.
ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯ 24ನೆ ವಾರ್ಷಿಕದ ಪ್ರಯುಕ್ತ ಮರ್ಹೂಂ ಉಸ್ಮಾನ್ ಹಾಜಿ ಜ್ಞಾಪಕಾರ್ಥವಾಗಿ ಅತ್ಯಾಧುನಿಕ ಮಾದರಿಯ ಐಸಿಯು ಆಂಬ್ಯುಲನ್ಸಿನ ಕೀಲಿ ಕೈಯನ್ನು ಸಮಸ್ತ ಮುಶಾವರಾ ಕೇಂದ್ರ ಸಮಿತಿ ಸದಸ್ಯರಾದ ಕೊಡಗು ನಾಯಿಬ್ ಖಾಝಿ ಎಂ.ಎಂ ಅಬ್ದುಲ್ಲಾ ಫೈಝಿ ಅವರು ಸಂಘಟನೆಯ ಸಿದ್ದಾಪುರ ವಲಯ ಅಧ್ಯಕ್ಷ ಎಂ.ಎಂ ಸರ್ಫುದ್ದೀನ್ ಅವರಿಗೆ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ಕೊರೋನಾ ಸಂದರ್ಭದ ಸೇವೆಯನ್ನು ಗುರುತಿಸಿ
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಕಳೆದ ಹಲವು ವರ್ಷಗಳಿಂದ ಸಿದ್ದಾಪುರ ವ್ಯಾಪ್ತಿಯಲ್ಲಿ ಆಂಬ್ಯುಲನ್ಸ್ ಕೊರತೆ ಇರುವುದನ್ನು ಅರಿತು ದಾನಿಗಳ ಸಹಕಾರದೊಂದಿಗೆ ಐಸಿಯು, ಆಕ್ಸಿಜನ್, ವೆಂಟಿಲೇಟರ್, ಇಸಿಜಿ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳಿರುವ ಆಂಬ್ಯುಲನ್ಸನ್ನು ಲೋಕಾರ್ಪಣೆಗೊಳಿಸಲಾಗಿದ್ದು,
ಅತ್ಯಂತ ಕಡು ಬಡ ನಿರ್ಗತಿಕರಿಗೆ ಉಚಿತ ಸೇವೆ ಒದಗಿಸುವುದಾಗಿ ಎಂ.ಎಂ ಸರ್ಫುದ್ದೀನ್ ತಿಳಿಸಿದರು.
ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಮುಸ್ತಫ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾಸ್ಟರ್,
ಸ್ಥಳೀಯ ಮಸೀದಿ ಖತೀಬ್ ನೌಫಲ್ ಹುದವಿ, ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ತಮ್ಲೀಕ್ ದಾರಿಮಿ, ಕೆ.ಎಂ.ಸಿ.ಸಿ ಆಂಬ್ಯುಲನ್ಸ್ ಚಾಲಕ ಹನೀಫ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ.ಎಸ್ ವೆಂಕಟೇಶ್, ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ಕೆ ಹಕೀಂ ಪ್ರಮುಖರಾದ ರವೂಫ್ ಹಾಜಿ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಸಿಪಿಎಂ ಬಶೀರ್ ಹಾಜಿ, ಉಮ್ಮರ್ ಫೈಝಿ, ಆರಿಫ್ ಫೈಝಿ, ಸಬಾಸ್ಟಿನ್, ಕೆ.ಯು ಮಜೀದ್, ಹಸೈನಾರ್ ಸೇರಿದಂತೆ ಮತ್ತಿತರರು ಇದ್ದರು.